ಶಿಸ್ತಿಗೆ ಹೆಸರಾಗಿರುವ ಪೊಲೀಸ್ ಇಲಾಖೆಯಲ್ಲಿ ಅನೈತಿಕ ಸಂಬಂಧದ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ರಾಜಸ್ಥಾನದ ಡಿಎಸ್‌ಪಿ ಮತ್ತು ಮಹಿಳಾ ಪೇದೆಯನ್ನು ಇತ್ತೀಚೆಗೆ ಕೆಲಸದಿಂದ ಅಮಾನತಿನಲ್ಲಿ ಇರಿಸಲಾಗಿತ್ತು.
ಬಳಿಕ ಅವರಿಬ್ಬರು ಪೇದೆಯ ಪುಟ್ಟ ಮಗನ ಎದುರೇ ರಾಸಲೀಲೆ ಆಡುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಸಂಬಂಧ ಗಂಭೀರ ಕ್ರಮಕ್ಕೆ ಮುಂದಾದ ರಾಜಸ್ಥಾನ ಸರ್ಕಾರವು ಇಬ್ಬರೂ ಪೊಲೀಸ್ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಿ ಆದೇಶ ಹೊರಡಿಸಿದೆ.
ಇಬ್ಬರೂ ಮಾಜಿ ಪೊಲೀಸ್ ಸಿಬ್ಬಂದಿಯನ್ನು ಬಂಧಿಸಿ, ಸದ್ಯ ನ್ಯಾಯಾಂಗ ವಶದಲ್ಲಿ ಇರಿಸಲಾಗಿದೆ. ಅವರನ್ನು ಅನೈತಿಕ ಸಂಬಂಧ ಹಾಗೂ ಸೇವೆಯಲ್ಲಿಯೇ ಅಸಭ್ಯ ವರ್ತನೆ ಪ್ರಕರಣದಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ. ಈ ನಡುವೆಯೇ ರಾಜಸ್ಥಾನ ನಾಗರಿಕ ಸೇವೆಗಳ ನಿಯಮಾವಳಿಗಳ ಪ್ರಕಾರ ಮುಖ್ಯಮಂತ್ರಿಗಳ ಕಚೇರಿಯಿಂದ ಖಡಕ್ ಆದೇಶ ಹೊರಬಿದ್ದಿದೆ. ಸೆ.8 ರಂದೇ ಇಬ್ಬರು ಮಾಜಿ ಸಿಬ್ಬಂದಿ ವಿರುದ್ಧ ಅಮಾನತು ಆದೇಶ ಹೊರಡಿಸಲಾಗಿತ್ತು. ಈಗ ಇಬ್ಬರನ್ನೂ ಪೊಲೀಸ್ ಸೇವೆಯಿಂದ ಸರ್ಕಾರವು ಕಿತ್ತೊಗೆದಿದೆ.
ನಿರ್ಣಾಯಕವಾಗಿದ್ದರೆ ಮಾತ್ರವೇ ಡಿಎನ್‌ಎ ಪರೀಕ್ಷೆ: ಸುಪ್ರೀಂಕೋರ್ಟ್ ಮಹತ್ವದ ಸೂಚನೆ
ಜುಲೈನಲ್ಲಿ ಅಜ್ಮೇರ್ ಜಿಲ್ಲೆಯ ಪುಷ್ಕರ್ ಪಟ್ಟಣದ ರೆಸಾರ್ಟ್‌ಗೆ ತೆರಳಿದ್ದ ಮಾಜಿ ಸಿಬ್ಬಂದಿ, ಕರ್ತವ್ಯದ ವೇಳೆಯೇ ಸ್ವಿಮ್ಮಿಂಗ್ ಪೂಲ್‌ಗೆ ಇಳಿದು ರಾಸಲೀಲೆ ನಡೆಸಿದ್ದರು. ಇದು ಮಹಿಳಾ ಪೇದೆಯ ಮೊಬೈಲ್‌ನಲ್ಲಿ ಸೆರೆಯಾಗಿತ್ತು. ಮಹಿಳಾ ಪೇದೆಯ ಆರು ವರ್ಷದ ಮಗುವನ್ನು ಕೂಡ ವಿಡಿಯೋದಲ್ಲಿ ಕಾಣಬಹುದಾಗಿದೆ. ವಿಡಿಯೊ ವೈರಲ್ ಆದ ಸಂಬಂಧ ಜಿಲ್ಲಾ ಪೊಲೀಸರು ಸ್ವಯಂಪ್ರೇರಿತರಾಗಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆಗೆ ಮುಂದಾಗಿದ್ದಾರೆ. ಪೊಕ್ಸೊ ಕಾಯಿದೆ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲು ಮಹಿಳಾ ಪೇದೆ ಪತಿಯು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಕೂಡ ಬರೆದಿದ್ದಾರೆ.