
ರೋಜರ್ ಫೆಡರರ್ರ ದೊಡ್ಡ ಅಭಿಮಾನಿಯಾಗಿದ್ದ ಇಝಾನ್ ಅಹ್ಮದ್ ಎಂಬ ಹುಡುಗ 2017ರಲ್ಲಿ ಪತ್ರಿಕಾಗೋಷ್ಠಿಯೊಂದರಲ್ಲಿ ಫೆಡರರ್ಗೆ ಬಹುಮುಖ್ಯವಾದ ಪ್ರಶ್ನೆಯೊಂದನ್ನು ಕೇಳಿದ್ದ .
ದಯವಿಟ್ಟು ನೀವು ಇನ್ನೂ ಎಂಟರಿಂದ ಒಂಬತ್ತು ವರ್ಷಗಳ ಕಾಲ ಟೆನ್ನಿಸ್ ಆಟವನ್ನು ಮುಂದುವರಿಸಬಹುದೇ..? ಆಗ ನಾನು ನಿಮ್ಮೊಂದಿಗೆ ಆಡಬಹುದೇ..? ಎಂದು ಐದು ವರ್ಷಗಳ ಹಿಂದೆ ನಡೆದ ಸಮಾರಂಭದಲ್ಲಿ ಪುಟ್ಟ ಅಹ್ಮದ್, ಫೆಡರರ್ನ್ನು ಕೇಳಿದ್ದನು.
ಬಾಲಕನ ಈ ಪ್ರಶ್ನೆಗೆ ಫೆಡರರ್ ಆಯ್ತು ಎಂದು ಉತ್ತರಿಸಿದ್ದರು. ಇದು ಕೇವಲ ಭರವಸೆಯೇ ಎಂದು ಅಹ್ಮದ್ ಕೇಳಿದ್ದ. ಇದಕ್ಕೆ ನಗುತ್ತಲೇ ಫೆಡರರ್ ಪಿಂಕಿ ಪ್ರಾಮಿಸ್ ಎಂದು ನಗುತ್ತಲೇ ಉತ್ತರಿಸಿದ್ದರು. ಆದರೆ ತನ್ನ ಕನಸು ನನಸಾಗಬಹುದು ಎಂಬ ಊಹೆ ಕೂಡ ಅಹ್ಮದ್ಗೆ ಇರಲಿಲ್ಲ.
ಇದೀಗ ಟೆನ್ನಿಸ್ ಆಟಗಾರನಾಗಿರುವ ಜಿಜೌ ತರಬೇತಿ ಕಾರ್ಯಕ್ರಮದಲ್ಲಿ ಫೆಡರರ್ನ್ನು ಭೇಟಿಯಾಗಿದ್ದು ತನ್ನ ಕನಸನ್ನು ನನಸು ಮಾಡಿಕೊಂಡಿದ್ದಾನೆ.