ಪುರಿ: ಅಂಕಲ್…ಅಂಕಲ್ ಎಂದು ಬಾಯಿ ತುಂಬಾ ಕರೆಯುತ್ತಿದ್ದ ಮುಗ್ದೆ, ಕೇವಲ 5 ವರ್ಷದ ಮಗುವಿನ ಮೇಲೆ ಪಾಪಿಯೊಬ್ಬ ಅತ್ಯಾಚಾರ ನಡೆಸಿರುವ ಅಮಾನವೀಯ ಘಟನೆ ನಡೆದಿದೆ.
ಈ ಘಟನೆ ಒಡಿಶಾದ ಪುರಿಯಲ್ಲಿ ನಡೆದಿದ್ದು, ತೀವ್ರ ಅಸ್ವಸ್ಥವಾಗಿರುವ ಪುಟ್ಟ ಬಾಲಕಿ ಸಾವು – ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದೆ.
ಪಕ್ಕದ ಮನೆಯಲ್ಲಿಯೇ ಇದ್ದ ಪಾಪಿ ಮಹೇಶ್ ಮೊಹಂತಿ(35) ಪಕ್ಕದ ಮನೆಯಲ್ಲಿಯೇ ಇದ್ದ ಐದು ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಈ ಪಾಪಿ ಈ ಮಗುವಿದ್ದ ಪಕ್ಕದ ಮನೆಯಲ್ಲಿಯೇ ಬಾಡಿಗೆ ಮನೆ ಹಿಡಿದು ವಾಸವಾಗಿದ್ದ. ಬಾಲಕಿಯ ಪಾಲಕರೊಂದಿಗೆ ಉತ್ತಮ ಸ್ನೇಹ ಬೆಳೆಸಿ ಅವರಿಗೆ ಹತ್ತಿರವಾಗಿದ್ದ.
ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಗೆ ನುಗ್ಗಿ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಪರಾರಿಯಾಗಿದ್ದಾನೆ. ಆತ ಮನೆಯಿಂದ ಓಡಿ ಹೋಗುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಆ ನಂತರ ಮಗುವನ್ನು ನೋಡಿದಾಗ ಮಗು ಅಳುತ್ತಿತ್ತು. ಅಲ್ಲದೇ, ಪರಿಸ್ಥಿತಿ ಚಿಂತಾಜನಕವಾಗಿತ್ತು.
ಕೂಡಲೇ ಪಾಲಕರು ಹಾಗೂ ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದು, ಮಗು ಸಾವು- ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದೆ. ಈ ಕುರಿತು ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.