alex Certify ಪುಟ್ಟ ಕಂದಮ್ಮನನ್ನು ಸಂತೈಸಿದ ಗಗನಸಖಿ; ನೆಟ್ಟಿಗರಿಂದ ವ್ಯಾಪಕ ಪ್ರಶಂಸೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟ್ಟ ಕಂದಮ್ಮನನ್ನು ಸಂತೈಸಿದ ಗಗನಸಖಿ; ನೆಟ್ಟಿಗರಿಂದ ವ್ಯಾಪಕ ಪ್ರಶಂಸೆ

ವಿಮಾನದಲ್ಲಿ ಅಳುತ್ತಿದ್ದ ಪುಟ್ಟ ಮಗುವನ್ನು ಎತ್ತಿಕೊಂಡ ಗಗನಸಖಿಯೊಬ್ಬರು ಸಂತೈಸುತ್ತಿರುವ ಹೃದಯಸ್ಪರ್ಶಿ ವಿಡಿಯೋವೊಂದು ವೈರಲ್​ ಆಗುತ್ತಿದೆ.

ಬ್ರೆಸಿಲಿಯಾದಿಂದ ಬ್ರೆಜಿಲ್​ನ ಕ್ಯುಯಾಬಾ ವಿಮಾನದಲ್ಲಿದ್ದ ಗಗನ ಸಖಿಯು ಪುಟ್ಟ ಮಗುವಿಗೂ ಎಂತಹ ಕಾಳಜಿ ತೋರುತ್ತಿದ್ದಾರೆ ಎಂದು ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೋವನ್ನು ಗುಡ್​ ನ್ಯೂಸ್​ ಮೂವ್​ಮೆಂಟ್​ ಎಂಬ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಪೋಸ್ಟ್​ ಮಾಡಲಾಗಿದೆ. ಅಳುತ್ತಿದ್ದ ಮಗುವನ್ನು ಶಾಂತಗೊಳಿಸಲು ಯತ್ನಿಸುತ್ತಿರುವ ಗಗನಸಖಿಯು ಮಗು ಮಲಗುವವರೆಗೂ ತಮ್ಮ ತೋಳಿನಲ್ಲಿಯೇ ಮಗುವನ್ನು ಎತ್ತಿಕೊಂಡಿದ್ದಾರೆ.

ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಲಕ್ಷಗಟ್ಟಲೇ ಲೈಕ್ಸ್​ ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...