ನವದೆಹಲಿ: ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತಾ ಚೆಕ್‌ಪಾಯಿಂಟ್‌ನಲ್ಲಿ ಸಿಐಎಸ್‌ಎಫ್ (ಕೇಂದ್ರ ಕೈಗಾರಿಕಾ ಭದ್ರತಾ ಪಡೆ) ಸಿಬ್ಬಂದಿ ಮಗುವಿನೊಂದಿಗೆ ಆಟವಾಡುತ್ತಿರುವ ದೃಶ್ಯ ಕಂಡುಬಂದಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿರೋ ಈ ಹೃದಯಸ್ಪರ್ಶಿ ವಿಡಿಯೋವನ್ನು 2.3 ಮಿಲಿಯನ್ ಮಂದಿ ವೀಕ್ಷಿಸಿದ್ದು, 80 ಸಾವಿರ ಲೈಕ್‌ಗಳೊಂದಿಗೆ ವೈರಲ್ ಆಗಿದೆ. ಪ್ರಯಾಣಿಕರ ಸಾಮಾನು ಸರಂಜಾಮುಗಳನ್ನು ಪರಿಶೀಲಿಸಲು ಕನ್ವೇಯರ್ ಬೆಲ್ಟ್ ಮೇಲೆ ನಿಲ್ಲಿಸಿದ ಭದ್ರತಾ ಅಧಿಕಾರಿ ಪುಟ್ಟ ಕಂದನ ಜೊತೆ ಆಟವಾಡಿದ್ದಾರೆ.
ಸಿಐಎಸ್ಎಫ್ ಸಿಬ್ಬಂದಿ ಮಗುವಿನ ಪಾದಗಳನ್ನು ಎಕ್ಸ್-ರೇ ಸ್ಕ್ಯಾನರ್ ಕಡೆಗೆ ಹೊರಳಿಸುತ್ತಾ, ಆಕೆಯನ್ನು ಹಿಂದಕ್ಕೆ ಎಳೆದಿದ್ದಾರೆ. ವಿಡಿಯೋವನ್ನು ಮಗುವಿನ ಪೋಷಕರು ರೆಕಾರ್ಡ್ ಮಾಡಿದ್ದಾರೆ ಎಂದು ತೋರುತ್ತದೆ.
ನೆಟ್ಟಿಗರು ಈ ಮುದ್ದಾದ ವಿಡಿಯೋವನ್ನು ಇಷ್ಟಪಟ್ಟಿದ್ದು, ಮಗುವಿನೊಂದಿಗೆ ಅಧಿಕಾರಿಯು ಆಟವಾಡುವುದು ನೋಡಿದ್ರೆ ನಿಜವಾಗಿಯೂ ಮನಸ್ಸಿಗೆ ಮುದ ನೀಡಿದೆ ಎಂದು ಹೇಳಿದ್ದಾರೆ. ಬಳಕೆದಾರರು ಹೃದಯದ ಎಮೋಜಿಗಳೊಂದಿಗೆ ಕಾಮೆಂಟ್ ವಿಭಾಗವನ್ನು ತುಂಬಿದ್ದಾರೆ. ಭದ್ರತಾ ಅಧಿಕಾರಿ ಕರ್ತವ್ಯ ಮತ್ತು ಕಾಳಜಿಯನ್ನು ಬಹಳ ಅದ್ಭುತವಾಗಿ ನಿರ್ವಹಿಸಿದ್ದಾರೆ ಎಂದು ನೆಟ್ಟಿಗರು ಹೊಗಳಿದ್ದಾರೆ.
https://youtu.be/jK1Q9IH9yDU