ಇಂದಿನ ಮಕ್ಕಳು ಗ್ರಾಮೀಣ ಸೊಗಡಿನ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ಗ್ರಾಮೀಣ ಕ್ರೀಡೆಯಾಗಿರಬಹುದು ಅಥವಾ ಅಲ್ಲಿನ ಸಂಸ್ಕೃತಿಯಾಗಿರಬಹುದು ಬಹುತೇಕ ಮರೆಯಾಗುತ್ತಿದೆ.
ಅದರಲ್ಲೂ ಪ್ರಸ್ತುತ ದಿನಗಳ ಮಾಲ್ ಸಂಸ್ಕೃತಿಯಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ನಡೆಯುವ ಸಂತೆಯೇ ಇಂದಿನ ಮಕ್ಕಳಿಗೆ ಪರಿಚಯವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಶಿಕಾರಿಪುರದ ಶಾಲೆಯೊಂದು ಮಾದರಿ ಕಾರ್ಯವನ್ನು ಮಾಡಿದೆ.
ಶಿಕಾರಿಪುರದ ಮೈತ್ರಿ ಶಾಲೆಯ ಎಲ್ ಕೆ ಜಿ ಮತ್ತು ಯುಕೆಜಿ ವಿದ್ಯಾರ್ಥಿಗಳನ್ನು ಶನಿವಾರದಂದು ಸಂತೆಗೆ ಕರೆದುಕೊಂಡ ಹೋದ ಶಿಕ್ಷಕರು ಕಾಳು, ಹಣ್ಣು, ಸೊಪ್ಪು ಮೊದಲಾದವುಗಳನ್ನು ಪರಿಚಯಿಸಿದ್ದಲ್ಲದೇ ವ್ಯಾಪಾರ ಮಾಡುವ ವಿಧಾನವನ್ನು ತೋರಿಸಿಕೊಟ್ಟಿದ್ದಾರೆ.
ಮಕ್ಕಳು ಸಂತೆಗೆ ಆಗಮಿಸಿದ್ದಕ್ಕೆ ವ್ಯಾಪಾರಿಗಳು ಸಹ ಸಂತಸಗೊಂಡಿದ್ದು, ಉತ್ಸಾಹದಿಂದ ವಿವರಿಸಿದ್ದಾರೆ. ಅಷ್ಟೇ ಅಲ್ಲ, ಮಕ್ಕಳಿಗೆ ಬಾದಾಮಿ, ಗೋಡಂಬಿ, ಹಣ್ಣು, ತರಕಾರಿಯನ್ನು ನೀಡಿದ್ದಾರೆ.