ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಆಫ್ರಿಕನ್ ಪುಟಾಣಿ ಪೋರರು ಎಲ್ಲರ ಗಮನ ಸೆಳೆಯುತ್ತಾರೆ. ಹಿಂದಿ, ಇಂಗ್ಲಿಷ್ ಹಿಟ್ ಹಾಡುಗಳಿಗೆ ಡಾನ್ಸ್ ಮಾಡಿ, ಎಲ್ಲರು ಹುಬ್ಬೇರಿಸುವಂತೆ ಮಾಡೋ ಪೋರರು ಈಗ ಮತ್ತೊಂದು ಟ್ರೆಂಡ್‌ನಲ್ಲಿರುವ ಹಾಡಿಗೆ ಡಾನ್ಸ್ ಮಾಡಿ ಎಲ್ಲರ ಹೃದಯ ಗೆದ್ದಿದ್ದಾರೆ. ಅದೇ ಡಾನ್ಸ್ ವಿಡಿಯೊ ಈಗ ವೈರಲ್ ಆಗಿದೆ.
ನೈಜೀರಿಯನ್ ಗಾಯಕ, ರ್ಯಾಪರ್ ರೆಮಾ ಮತ್ತುಗಾಯಕಿ ಸೆಲೆನಾ ಗೊಮೆಜ್ ಇವರಿಬ್ಬರ ಕಾಂಬಿನೇಷನ್‌ನಲ್ಲಿ ಬಂದಿದ್ದ “ಕಾಮ್ ಡೌನ್“ (`CLAM DOWN`) 2022ರಲ್ಲಿ ಸೂಪರ್ ಹಿಟ್ ಆಗಿತ್ತು. ಅದೇ ಟ್ರೆಂಡಿಂಗ್‌ನಲ್ಲಿರುವ ಹಾಡಿಗೆ, ಅನೇಕರು ಡಾನ್ಸ್ ಮಾಡಿ ವಿಡಿಯೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಅದೇ ರೀತಿ ಈಗ ಈ ಮೂವರು ಪೋರರು ಈ ಹಾಡಿಗೆ ನೃತ್ಯ ಮಾಡಿ, ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಮಕ್ಕಳ ಈ ಡಾನ್ಸ್ ನೋಡಿ ನೆಟ್ಟಿಗರು ಫುಲ್ ಫಿದಾ ಆಗ್ಹೋಗಿದ್ದಾರೆ.
ಅದರಲ್ಲೂ ಮಕ್ಕಳು ಜೋಶ್‌ನಿಂದ ಡಾನ್ಸ್ ಮಾಡ್ತಿರೋದನ್ನ ನೋಡೋದೇ ಒಂದು ಖುಷಿ. ಈ ವಿಡಿಯೋ ಸೂಕ್ಷ್ಮವಾಗಿ ಗಮನಿಸಿದರೆ, ಈ ಮೂವರು ಪೋರರ ಹಿಂದೆ ಇರೋ ಹುಡುಗರು ಕೂಡಾ ಈ ಹಾಡನ್ನ ಕೇಳಿ, ಎಂಜಾಯ್ ಮಾಡ್ತಾ ಅವರು ಕೂಡಾ ನಿಂತಲ್ಲೇ ನೃತ್ಯ ಮಾಡ್ತಿರೋದು ವಿಶೇಷವಾಗಿದೆ.
ನೆಟ್ಟಿಗರು ಈ ವಿಡಿಯೋ ನೋಡಿ ಮಕ್ಕಳ ಪ್ರತಿಭೆಗೆ ಫಿದಾ ಆಗ್ಹೊಗಿದ್ದಾರೆ. ಕಮೆಂಟ್ ಸೆಕ್ಷನ್‌ನಲ್ಲಂತೂ ಈ ಮಕ್ಕಳ ಡಾನ್ಸ್ ನೋಡಿ ಹಾಡಿ ಹೊಗಳಿದ್ದಾರೆ. ಕೆಲವರಂತೂ ಇನ್‌ಸ್ಟಾಗ್ರಾಮ್‌ನಲ್ಲಿ “ನಾನು ನೋಡಿರುವ ಅದ್ಭುತ ವಿಡಿಯೋಗಳಲ್ಲಿ ಇದು ಒಂದು ಎಂದು ಹೇಳಿದ್ದಾರೆ. ಈ ವಿಡಿಯೋ ನಾನು ಮತ್ತೆ ಮತ್ತೆ ನೋಡಲು ಇಷ್ಟ ಪಡ್ತೇನೆ“ ಎಂದು ಬರೆದಿದ್ದಾರೆ. ಇನ್ನೊಬ್ಬರು, “ಇವರ ನೃತ್ಯ ನೋಡೋದ್ರಲ್ಲೇ ಒಂದು ಖುಷಿ ಇದೆ“ ಎಂದು ಹೇಳಿದ್ಧಾರೆ. ಮಗದೊಬ್ಬರು “ಈ ವಿಡಿಯೋವನ್ನ ನಾನು ಕಡಿಮೆ ಅಂದರೂ ನೂರಕ್ಕೂ ಹೆಚ್ಚು ಬಾರಿ ನೋಡಿದ್ದೇನೆ” ಎಂದು ಕಾಮೆಂಟ್ ಮಾಡಿದ್ದಾರೆ.
https://youtu.be/o6UyQoeobhk