ಪಿಸ್ತಾ ಆರೋಗ್ಯಕ್ಕೆ ತುಂಬಾ ಉತ್ತಮ. ಪಿಸ್ತಾ ಎಲ್ಲಾ ರೀತಿಯ ಆಂಟಿ-ಆಕ್ಸಿಡೆಂಟ್ಸ್ ಗಳಿಂದ ತುಂಬಿದೆ. ಇದು ನಮ್ಮನ್ನು ಕ್ಯಾನ್ಸರ್ ಮತ್ತು ಹೃದಯದ ಸಮಸ್ಯೆಯಿಂದ ಕಾಪಾಡುತ್ತದೆ. ಮಾಂಸಹಾರ ಸೇವಿಸದೆ ಉಂಟಾದ ಪ್ರೋಟೀನ್ ಕೊರತೆಯನ್ನು ಪಿಸ್ತಾ ತಿಂದು ನಿವಾರಿಸಿಕೊಳ್ಳಬಹುದು. ಹಾಗಾಗಿ ಪಿಸ್ತಾ ಸೇವನೆಯಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ.
*ಇದು ಕಣ್ಣುಗಳಿಗೆ ತುಂಬಾ ಒಳ್ಳೆಯದು. ಕಣ್ಣಿನ ಪೊರೆ ಮತ್ತು ವಯಸ್ಸಿಗೆ ಸಂಬಂಧಿಸಿದ ಕಾಯಿಲೆಗಳನ್ನು ತಡೆಯುತ್ತದೆ.
*ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಡುತ್ತದೆ. ಹಾಗಾಗಿ ಮಧುಮೇಹಿಗಳಿಗೆ ಇದು ತುಂಬಾ ಒಳ್ಳೆಯದು.
*ಪಿಸ್ತಾದಲ್ಲಿ ಫೈಬರ್ ಸಮೃದ್ಧವಾಗಿದೆ. ಇದು ಜೀರ್ಣಾಂಗ ಮತ್ತು ಕರುಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತವೆ. ಮಲಬದ್ಧತೆಯನ್ನು ತಡೆಗಟ್ಟುತ್ತದೆ. ಹಾಗೇ ಇದು ಹೊಟ್ಟೆಯಲ್ಲಿ ಉತ್ತಮ ಬ್ಯಾಕ್ಟೀರಿಯಾಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ.