ಕಲಬುರ್ಗಿ: ಸಂಸದ ಉಮೇಶ್ ಜಾಧವ್ ವಿರುದ್ಧ ಗಂಭೀರ ಆರೋಪ ಮಾಡಿರುವ ಶಾಸಕ ಪ್ರಿಯಾಂಕ್ ಖರ್ಗೆ, ಪಿಡಿಒ ಬೆದರಿಸಿ ಬಿಲ್ ಮಾಡಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
40 ಪರ್ಸೆಂಟ್ ಕಮಿಷನ್ ಬಗ್ಗೆ ಗುತ್ತಿಗೆದಾರರ ಸಂಘ ಮಾತನಾಡುತ್ತಿದೆ. ಆದರೆ ಕಲಬುರ್ಗಿ ಜಿಲ್ಲೆಯಲ್ಲಿ ವಸೂಲಿ 40 ಪರ್ಸೆಂಟ್ ನ್ನೂ ದಾಟಿದೆ. ಗ್ರಾಮ ಪಂಚಾಯಿತಿ ಸದಸ್ಯರು ಉದ್ಯೋಗ ಖಾತ್ರಿಯಲ್ಲಿ ಆಗದ ಕೆಲಸಕ್ಕೆ ಸಂಸದರ ಮೂಲಕ ಬಿಲ್ ಮಾಡಿಸಿಕೊಂಡಿದ್ದಾರೆ. ಬಿಲ್ ಗಾಗಿ ಚಿತ್ತಾಪುರ ತಾಲೂಕಿನ ಬಿಳಗೆರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಬೆದರಿಕೆ ಹಾಕಿ ಬಿಲ್ ಮಾಡಿಸಿಕೊಂಡಿರುವ ವಿಡಿಯೋ ನನ್ನ ಬಳಿ ಇದೆ. ಆದರೆ ನನ್ನ ಕ್ಷೇತ್ರದ ವಿಚಾರ ಎಂಬ ಕಾರಣಕ್ಕೆ ವಿಡಿಯೋ ಬಿಡುಗಡೆ ಮಾಡುತ್ತಿಲ್ಲ ಎಂದಿದ್ದಾರೆ.
ಕರ್ನಾಟಕ ಬಂದ್ ಗೆ ಕನ್ನಡಪರ ಸಂಘಟನೆಗಳಿಂದಲೇ ವಿರೋಧ
ಪ್ರಿಯಾಂಕ್ ಖರ್ಗೆ ಹಿಂದೆ ದೊಡ್ಡ ಬ್ಯಾನರ್ ಇದೆ. ಖರ್ಗೆ ಬ್ಯಾನರ್ ನಡಿ ಬಂದಿದ್ದಾರೆ ಎಂಬ ಉಮೇಶ್ ಜಾಧವ್ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಖರ್ಗೆ ಮನೆಯಲ್ಲಿ ಹುಟ್ಟಬೇಕು ಎಂದು ನಾನು ಅರ್ಜಿ ಹಾಕಿರಲಿಲ್ಲ. ಹಾಗಾದರೆ ಅವಿನಾಶ್ ಜಾಧವ್, ಉಮೇಶ್ ಜಾಧವ್ ಮನೆಯಲ್ಲಿ ಅರ್ಜಿ ಹಾಕಿ ಹುಟ್ಟಿದ್ದಾರಾ? ಅವಿನಾಶ್ ಜಾಧವ್ ಕೂಡ ಜಾಧವ್ ಬ್ಯಾನರ್ ನಲ್ಲಿ ಬಂದವರು. ಉಮೇಶ್ ಜಾಧವ್ ಯಾರ ಬ್ಯಾನರ್ ನಲ್ಲಿ ಬಂದವರು ಎಂದು ನೆನಪಿಸಿಕೊಳ್ಳಲಿ ಎಂದು ಟೀಕಿಸಿದ್ದಾರೆ.