alex Certify ಪಿಜಿಯಲ್ಲಿ ವಾಸವಿದ್ದ ಯುವಕ ಬಾತ್ ರೂಂ ನಲ್ಲಿ ಶವವಾಗಿ ಪತ್ತೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಿಜಿಯಲ್ಲಿ ವಾಸವಿದ್ದ ಯುವಕ ಬಾತ್ ರೂಂ ನಲ್ಲಿ ಶವವಾಗಿ ಪತ್ತೆ..!

ಆತ ಸಿನಿಮಾದಲ್ಲಿ ಏನಾದರೂ ಸಾಧನೆ ಮಾಡಬೇಕು. ಹೆಸರು ಮಾಡಬೇಕು ಅಂತ ತನ್ನ ಹುಟ್ಟೂರು ತೊರೆದು ಸಿಲಿಕಾನ್ ಸಿಟಿ ಬೆಂಗಳೂರಿಗೆ ಬಂದಿದ್ದ. ಹೆಸರು ಮಾಡಬೇಕು ಎಂದವನ ಬಾಳಲ್ಲಿ ವಿಧಿಯಾಟವೇ ಬೇರೆಯಾಗಿತ್ತು.

ಹೌದು, ಪಿಜಿಯಲ್ಲಿ ಯುವಕನೊಬ್ಬ ಶವವಾಗಿ ಪತ್ತೆಯಾಗಿದ್ದಾನೆ. ಗೋವಿಂದರಾಜ ನಗರ ಠಾಣಾ ವ್ಯಾಪ್ತಿಯ ಅಗ್ರಹಾರ ದಾಸರಹಳ್ಳಿಯ ಪಿಜಿಯಲ್ಲಿ ಈ ಘಟನೆ ನಡೆದಿದೆ. ಅನಿಲ್ ಕುಮಾರ್ ಶವವಾಗಿ ಪತ್ತೆಯಾದ ದುರ್ದೈವಿ. ಸೆಪ್ಟೆಂಬರ್ 16 ರಿಂದಲೂ ನಾಪತ್ತೆಯಾಗಿದ್ದ ಅನಿಲ್ ಎಲ್ಲಿ ಹೋಗಿದ್ದಾನೆ ಎಂಬುದೇ ತಿಳಿದಿರಲಿಲ್ಲ. ಈ ವೇಳೆ ಸಿಸಿ ಕ್ಯಾಮರಾ ಚೆಕ್ ಮಾಡಿಸಿದಾಗ ಆತ ಬಾತ್ ರೂಂ ಹೋಗಿರುವುದು ಗೊತ್ತಾಗಿದೆ.

ಇನ್ನು ಅನಿಲ್ ಕುಮಾರ್, ಸಾವಿಗೂ ಮುನ್ನ ಮನೆಯವರ ಬಳಿ ಮಾತನಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ ತನಗೆ ಫುಡ್ ಫಾಯ್ಸನ್ ಆಗಿದೆ ಎಂದು ಹೇಳಿಕೊಂಡಿದ್ದರಂತೆ. ಸುರಕ್ಷತಾ ಕ್ರಮ ಇಲ್ಲದೇ ಇರೋದೆ ಇದಕ್ಕೆ ಕಾರಣವಾಗಿದೆ ಎಂದು ಪಿಜಿ ವಿರುದ್ಧ ಪೋಷಕರು ಆರೋಪ ಮಾಡಿದ್ದಾರೆ. ಇನ್ನು ಈ ಘಟನೆ ಸಂಬಂಧ ಗೊವಿಂದರಾಜನಗರ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...