ಇಪಿಎಫ್ ಚಂದಾದಾರರ ಖಾತೆಗೆ 2021-22 ರ ಪಿಎಫ್ ಬಡ್ಡಿಯನ್ನು ಸೋಮವಾರದಿಂದಲೇ ಜಮಾ ಮಾಡಲಾಗುತ್ತಿದೆ. ಪಿಎಫ್ ಚಂದಾದಾರರು ತಮ್ಮ ಪಿಎಫ್ ಬ್ಯಾಲೆನ್ಸನ್ನು ಎಸ್‌ಎಂಎಸ್, ಆನ್‌ಲೈನ್, ಮಿಸ್ಡ್ ಕಾಲ್ ಮತ್ತು ಉಮಂಗ್ ಎಂಬ 4 ವಿಭಿನ್ನ ವಿಧಾನಗಳ ಮೂಲಕ ಮನೆಯಲ್ಲಿದ್ದುಕೊಂಡೇ ಪರಿಶೀಲಿಸಬಹುದು.
ಇಪಿಎಫ್ ಖಾತೆಯ ಬ್ಯಾಲೆನ್ಸ್ ಆನ್‌ಲೈನ್‌ನಲ್ಲಿ ಪರಿಶೀಲಿಸುವುದು ಹೇಗೆ ?
epfindia.gov.in ಗೆ ಲಾಗಿನ್ ಮಾಡಿ
ನಿಮ್ಮ UAN ಸಂಖ್ಯೆ, ಪಾಸ್‌ವರ್ಡ್ ಮತ್ತು ಕ್ಯಾಪ್ಚಾ ಕೋಡ್ ಫೀಡ್ ಮಾಡಿ
ಇ-ಪಾಸ್‌ಬುಕ್ ಮೇಲೆ ಕ್ಲಿಕ್ ಮಾಡಿ
ಒಮ್ಮೆ ಎಲ್ಲ ವಿವರಗಳನ್ನು ದಾಖಲಿಸಿದರೆ, ನೀವು ಹೊಸ ಪುಟಕ್ಕೆ ಪ್ರವೇಶಿಸುತ್ತೀರಿ
ಬಳಿಕ ಸದಸ್ಯರ ಐಡಿ ತೆರೆಯಿರಿ
ನಿಮ್ಮ ಖಾತೆಯಲ್ಲಿ ಒಟ್ಟು ಇಪಿಎಫ್ ಬ್ಯಾಲೆನ್ಸ್ ಅನ್ನು ನೋಡಬಹುದು
ಉಮಂಗ್ ಅಪ್ಲಿಕೇಶನ್ ಮೂಲಕ ಇಪಿಎಫ್ ಬ್ಯಾಲೆನ್ಸ್ ಪರಿಶೀಲಿಸುವುದು ಹೇಗೆ ?
ಉಮಂಗ್ ಅಪ್ಲಿಕೇಶನ್ ತೆರೆಯಿರಿ
ಸರ್ಕಾರಿ ನೌಕರರಿಗೆ ಮುಖ್ಯ ಮಾಹಿತಿ: ಕಂಪ್ಯೂಟರ್ ಪರೀಕ್ಷೆ ಪಾಸಾಗದಿದ್ದರೆ ವೇತನ ಬಡ್ತಿ ಇಲ್ಲ
ಇಪಿಎಫ್‌ಒ ಮೇಲೆ ಕ್ಲಿಕ್ ಮಾಡಿ
ಉದ್ಯೋಗಿ ಕೇಂದ್ರಿತ ಸೇವೆಗಳ ಮೇಲೆ ಕ್ಲಿಕ್ ಮಾಡಿ
View Passbook ಆಯ್ಕೆಯ ಮೇಲೆ ಕ್ಲಿಕ್ ಮಾಡಿ
ನಿಮ್ಮ UAN ಸಂಖ್ಯೆ ಮತ್ತು ಪಾಸ್‌ವರ್ಡ್‌ನಲ್ಲಿ ಫೀಡ್ ಮಾಡಿ
ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ
ಈಗ ನೀವು ನಿಮ್ಮ ಇಪಿಎಫ್ ಬ್ಯಾಲೆನ್ಸ್ ಪರಿಶೀಲಿಸಬಹುದು
ಎಸ್‌ಎಂಎಸ್ ಮೂಲಕ ಇಪಿಎಫ್ ಬ್ಯಾಲೆನ್ಸ್ ಪರಿಶೀಲಿಸುವುದು ಹೇಗೆ ?
ಮೊಬೈಲ್ ಸಂಖ್ಯೆ ಹೊರತುಪಡಿಸಿ, UAN ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಸದಸ್ಯರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗಳಿಂದ SMS ಕಳುಹಿಸುವ ಮೂಲಕ ತಮ್ಮ ಪಿಎಫ್ ವಿವರಗಳನ್ನು ಪಡೆಯಬಹುದು. ಇದಕ್ಕಾಗಿ, ನೀವು 7738299899 ಗೆ ‘EPFOHO UAN’ ಎಂದು SMS ಮಾಡಬೇಕು.
ಮಿಸ್ಡ್ ಕಾಲ್ ಮೂಲಕ ಇಪಿಎಫ್ ಬ್ಯಾಲೆನ್ಸ್ ಪರಿಶೀಲನೆ ಹೇಗೆ ?
UAN ಪೋರ್ಟಲ್‌ನಲ್ಲಿ ನೋಂದಾಯಿಸಿದ ಚಂದಾದಾರರು, UAN ನಲ್ಲಿ ನೋಂದಾಯಿಸಿದ ತಮ್ಮ ಮೊಬೈಲ್ ಸಂಖ್ಯೆಯಿಂದ 011-22901406 ಗೆ ಮಿಸ್ಡ್ ಕಾಲ್ ನೀಡಬೇಕು. ಈ ಮೂಲಕ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಲ್ಲಿ ತಮ್ಮ ಪಿಎಫ್ ವಿವರಗಳನ್ನು ಪಡೆಯಬಹುದು.