2020ರ ಮಾರ್ಚ್ 27ರಂದು ‘ಪಿಎಂ ಕೇರ್ಸ್ ಫಂಡ್’ ಸ್ಥಾಪಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಇದರ ಅಧಿಕಾರೇತರ ಅಧ್ಯಕ್ಷರಾಗಿದ್ದಾರೆ. ‘ಪಿಎಂ ಕೇರ್ಸ್ ಫಂಡ್’ ಗೆ ಈವರೆಗೂ ಬಂದಿರುವ ಹಣದ ವಿವರ ಇಲ್ಲಿದೆ.
ಕಳೆದ ಮೂರು ವರ್ಷಗಳ ಅವಧಿಯಲ್ಲಿ ಬರೋಬ್ಬರಿ 12,691.82 ಕೋಟಿ ರೂಪಾಯಿಗಳ ದೇಣಿಗೆ ಬಂದಿದ್ದು, ಈ ಪೈಕಿ 535.43 ಕೋಟಿ ರೂಪಾಯಿ ವಿದೇಶಿ ದೇಣಿಗೆಯಾಗಿದೆ.
2021-22 ರ ಹಣಕಾಸು ವರ್ಷದಲ್ಲಿ ಕೋವಿಡ್ ಸಂಬಂಧಿತ ಯೋಜನೆಗಳಿಗಾಗಿ 3,716.29 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದ್ದು, 2022ರ ಮಾರ್ಚ್ ವೇಳೆಗೆ 5,415 ಕೋಟಿ ರೂಪಾಯಿ ಉಳಿಕೆಯಾಗಿತ್ತು. ಈಗ ಕೋವಿಡ್ ಇಳಿಮುಖವಾಗಿರುವ ಕಾರಣ ಬರುತ್ತಿರುವ ದೇಣಿಗೆಯೂ ಸಹ ಕಡಿಮೆಯಾಗಿದೆ ಎನ್ನಲಾಗಿದೆ.