ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಲಾಭಾರ್ಥಿಗಳಿಗೆ ಒಳ್ಳೆ ಸುದ್ದಿಯೊಂದು ಸಿಗಲಿದೆ. ಪಿಎಂ ಕಿಸಾನ್ ಯೋಜನೆಯ 10 ನೇ ಕಂತನ್ನು ಬಿಡುಗಡೆ ಮಾಡುವ ದಿನಾಂಕ ನಿಗದಿಯಾಗಿದೆ. ಕಂತಿನ ವರ್ಗಾವಣೆಗೆ ಸರ್ಕಾರ ಎಲ್ಲ ಸಿದ್ಧತೆ ನಡೆಸಿದೆ.
ಕೇಂದ್ರ ಸರ್ಕಾರ ಇದುವರೆಗೆ 11.37 ಕೋಟಿ ರೈತರಿಗೆ 1.58 ಲಕ್ಷ ಕೋಟಿ ರೂಪಾಯಿ ಹಣ ನೀಡಿದೆ. ಈಗ ಕೇಂದ್ರ ಸರ್ಕಾರ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮುಂದಿನ 10 ನೇ ಕಂತನ್ನು ಡಿಸೆಂಬರ್ 15, 2021 ರೊಳಗೆ ಬಿಡುಗಡೆ ಮಾಡಲು ಚಿಂತನೆ ನಡೆಸಿದೆ. ಕಳೆದ ವರ್ಷ ಡಿಸೆಂಬರ್ 25, 2020 ರಂದು ಸರ್ಕಾರ ರೈತರಿಗೆ ಹಣ ವರ್ಗಾವಣೆ ಮಾಡಿತ್ತು.
ನಿಮ್ಮ ಖಾತೆಗೆ ಹಣ ವರ್ಗಾವಣೆಯಾಗಿದೆಯಾ ಎಂಬುದನ್ನು ಪತ್ತೆ ಮಾಡುವುದು ಸುಲಭ. pmkisan.gov.in ವೆಬ್‌ಸೈಟ್‌ಗೆ ಹೋಗಿ ಫಾರ್ಮರ್ಸ್ ಕಾರ್ನರ್ ಕ್ಲಿಕ್ ಮಾಡಬೇಕು. ಅಲ್ಲಿ ಫಲಾನುಭವಿಗಳ ಸ್ಥಿತಿ ಮೇಲೆ ಕ್ಲಿಕ್ ಮಾಡಬೇಕು. ನಂತ್ರ ಪ್ರದೇಶ, ರಾಜ್ಯ, ಜಿಲ್ಲೆ, ಉಪಜಿಲ್ಲೆ, ಬ್ಲಾಕ್ ಮತ್ತು ಗ್ರಾಮಕ್ಕೆ ಸಂಬಂಧಿಸಿದ ಮಾಹಿತಿಯನ್ನು ಹಾಕಬೇಕು. ಗೆಟ್ ರಿಪೋರ್ಟ್ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರ ಸಂಪೂರ್ಣ ಮಾಹಿತಿ ನಿಮಗೆ ಸಿಗುತ್ತದೆ ಕಂತಿನ ಸ್ಥಿತಿಯ ಬಗ್ಗೆಯೂ ಮಾಹಿತಿಯಿರುತ್ತದೆ.
ಒಂದು ವೇಳೆ ಈ ಯೋಜನೆಯಡಿ 9ನೇ ಕಂತು ಸಿಕ್ಕಿಲ್ಲವೆಂದಾದ್ರೆ ಚಿಂತೆ ಬೇಡ. 9 ಮತ್ತು 10ನೇ ಕಂತು ನಿಮ್ಮ ಖಾತೆಗೆ ಒಟ್ಟಿಗೆ ಸಿಗಲಿದೆ. ರೈತರಿಗೆ ಒಟ್ಟಿಗೆ 4000 ರೂಪಾಯಿ ಸಿಗಲಿದೆ. ಈ ಸೌಲಭ್ಯವು ಸೆಪ್ಟೆಂಬರ್ 30 ರ ಮೊದಲು ಹೆಸರು ನೋಂದಾಯಿಸಿದ ರೈತರಿಗೆ ಮಾತ್ರ ಸಿಗಲಿದೆ.