ಪಾಸ್ಪೋರ್ಟ್ ಗೆ ಅರ್ಜಿ ಸಲ್ಲಿಸಿದ ವೇಳೆ ಸಂದರ್ಶನ ನೀಡಿದ ಬಳಿಕ ಪೊಲೀಸ್ ವೆರಿಫಿಕೇಶನ್ ಆದ ನಂತರವೇ ಪಾಸ್ ಪೋರ್ಟ್ ನಮ್ಮ ಕೈ ಸೇರುತ್ತದೆ. ಆದರೆ ಕೆಲವೊಮ್ಮೆ ಪೊಲೀಸ್ ವೆರಿಫಿಕೇಷನ್ ವಿಳಂಬವಾಗುತ್ತಿತ್ತು.
ಇದೀಗ ಪಾಸ್ಪೋರ್ಟ್ ಗೆ ಅರ್ಜಿ ಸಲ್ಲಿಸುವವರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಪಾಸ್ಪೋರ್ಟ್ ಸೇರಿದಂತೆ ಇತರೆ ಸೇವೆಗಳಿಗೆ ಅಗತ್ಯವಿರುವ ಪೊಲೀಸ್ ವೆರಿಫಿಕೇಶನ್ ಅನ್ನು ಗರಿಷ್ಠ 21 ದಿನಗಳೊಳಗಾಗಿ ಪೂರ್ಣಗೊಳಿಸಬೇಕಿದೆ.
ಈ ಕುರಿತಂತೆ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸಾಮಾಜಿಕ ಜಾಲತಾಣ ಟ್ವಿಟರ್ ಮೂಲಕ ಮಾಹಿತಿ ನೀಡಿದ್ದು, ಒಂದೊಮ್ಮೆ ಸ್ಥಳೀಯ ಪೊಲೀಸರು 21 ದಿನಗಳೊಳಗಾಗಿ ಈ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ಜಿಲ್ಲಾ ವರಿಷ್ಠಾಧಿಕಾರಿ ಮತ್ತು ಪೊಲೀಸ್ ಆಯುಕ್ತರಿಗೆ ದೂರು ನೀಡಬಹುದು ಎಂದು ತಿಳಿಸಲಾಗಿದೆ. ಅಂತಹ ಸಂದರ್ಭದಲ್ಲಿ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರವೀಣ್ ಸೂದ್ ಎಚ್ಚರಿಸಿದ್ದಾರೆ.