ಕಾಳುಗಳನ್ನು ಬಳಸಿಕೊಂಡು ಸಲಾಡ್ ಮಾಡಿಕೊಂಡು ಸವಿಯುತ್ತೇವೆ. ಇನ್ನು ಕೆಲವರು ಹಣ್ಣುಗಳ ಸಲಾಡ್ ತಿನ್ನುತ್ತಾರೆ. ಇದರ ಜತೆಗೆ ಪಾಸ್ತಾ ಇದ್ದರೆ ಕೇಳಬೇಕೆ…? ಪಾಸ್ತಾ ಪ್ರಿಯರಿಗಾಗಿ ಇಲ್ಲಿ ರುಚಿಕರವಾದ ಜತೆಗೆ ಆರೋಗ್ಯಕರವಾದ ಪಾಸ್ತಾ ಸಲಾಡ್ ಇದೆ. ಮಾಡಿ ಸವಿಯಿರಿ.
ಬೇಕಾಗುವ ಸಾಮಗ್ರಿಗಳು:
ಬೇಯಿಸಿದ ಪಾಸ್ತಾ – 1 ¼ ಕಪ್, ಸೌತೆಕಾಯಿ – 1/2, ಕ್ಯಾರೆಟ್ – 1/4, ಚೆರ್ರಿ ಟೊಮೆಟೊ – 9, ಈರುಳ್ಳಿ-1, ಕ್ಯಾಪ್ಸಿಕಂ – 1/2, ಕೊತ್ತಂಬರಿಸೊಪ್ಪು – 2 ಟೇಬಲ್ ಸ್ಪೂನ್, ಲಿಂಬೆಹಣ್ಣಿನ ಜ್ಯೂಸ್ – 1 ಟೇಬಲ್ ಸ್ಪೂನ್, ಜೇನುತುಪ್ಪ – 1 ಟೇಬಲ್ ಸ್ಪೂನ್, ಕಾಳುಮೆಣಸಿನ ಪುಡಿ – 1/2 ಟೀ ಸ್ಪೂನ್, ಆಲಿವ್ ಎಣ್ಣೆ – 2 ಟೇಬಲ್ ಸ್ಪೂನ್.
ಮಾಡುವ ವಿಧಾನ:
ಒಂದು ಬೌಲ್ ಗೆ ಎಣ್ಣೆ, ಜೇನುತುಪ್ಪ, ಕಾಳುಮೆಣಸಿನಪುಡಿ, ಲಿಂಬೆಹಣ್ಣಿ ರಸ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಟೊಮೆಟೊ, ಕೊತ್ತಂಬರಿಸೊಪ್ಪು, ಕ್ಯಾಪ್ಸಿಕಂ, ಸೌತೆಕಾಯಿ, ಈರುಳ್ಳಿಯನ್ನು ಚಿಕ್ಕದ್ದಾಗಿ ಕತ್ತರಿಸಿಕೊಳ್ಳಿ. ಕ್ಯಾರೆಟ್ ಅನ್ನು ತುರಿದುಕೊಳ್ಳಿ. ಒಂದು ದೊಡ್ಡ ಬೌಲ್ ಗೆ ಕತ್ತರಿಸಿಟ್ಟುಕೊಂಡ ತರಕಾರಿ, ಪಾಸ್ತಾವನ್ನು ಹಾಕಿ ಇದಕ್ಕೆ ಮಾಡಿಟ್ಟುಕೊಂಡ ಜೇನುತುಪ್ಪ, ಲಿಂಬೆಹಣ್ಣಿನ ಮಿಶ್ರಣ ಸೇರಿಸಿ ಸರ್ವ್ ಮಾಡಿ.