ಈಗಂತೂ ಮಕ್ಕಳಿಗೆ ನೂಡಲ್ಸ್, ಗೋಬಿ, ಚಾಟ್ಸ್, ಪಾಸ್ತಾ ಹೀಗೆ ಜಂಕ್ ಫುಡ್ ಗಳ ಮೇಲೆ ಬಲು ಪ್ರೀತಿ. ಬೆಳಗ್ಗಿನ ತಿಂಡಿಗೆ ಅಥವಾ ಸಂಜೆ ಹೊತ್ತಿಗೆ ಯಾವುದಾದರೂ ಒಂದನ್ನು ಸವಿಯಲು ಇಷ್ಟಪಡುತ್ತಾರೆ.
ಇನ್ನು ಪಾಸ್ತಾ ತಿನ್ನುವ ಮಕ್ಕಳಿಗೆ ಮತ್ತಷ್ಟು ರುಚಿಯಾಗಿ ಮಾಡಿಕೊಟ್ಟರೆ ಇಷ್ಟಪಟ್ಟು ತಿನ್ನುತ್ತಾರೆ. ಪಾಸ್ತಾ ತಯಾರಿಸುವಾಗ ಈ ಟಿಪ್ಸ್ ಅನುಸರಿಸಿ.
* ಪಾಸ್ತಾವನ್ನು ಹದವಾಗಿ ಬೇಯಿಸಿದಲ್ಲಿ ರುಚಿ ಹೆಚ್ಚು. ಪಾಸ್ತಾ ಬೇಯಿಸುವಾಗ ಹೆಚ್ಚು ನೀರು ಬಳಸಿ. ಕಡಿಮೆ ನೀರಿದ್ದರೆ ಒಂದಕ್ಕೊಂದು ಅಂಟುವ ಸಂಭವ ಹೆಚ್ಚು.
* ಉಪ್ಪು, ಎಣ್ಣೆ ಹಾಕಿ ಬೇಯಿಸುವುದರಿಂದ ಪಾಸ್ತಾ ಮುದ್ದೆಯಾಗುವುದಿಲ್ಲ. ಹೆಚ್ಚು ಬೇಯಿಸುವುದರಿಂದ ಪಾಸ್ತಾ ಒಡೆದುಕೊಂಡು ಆಕಾರ ಕಳೆದುಕೊಳ್ಳುತ್ತದೆ.
* ಸಾಸ್ ಬೆರೆಸಿ ಸ್ವಲ್ಪ ಬಿಸಿ ಮಾಡಿದರೆ ಪಾಸ್ತಾ ಹದವಾಗಿ ಬೆಂದು, ಅಂಟದೆ, ಉದುರಾಗಿ ರುಚಿಯಾಗಿರುತ್ತದೆ.
* ಪಾಸ್ತಾ ಬೇಯಲು ಬೇಕಾದ ಸಮಯ ಅದರ ಆಕಾರ, ಗಾತ್ರದ ಮೇಲೆ ಅವಲಂಬಿಸಿರುತ್ತದೆ.
* ಬೇಯಿಸಿದ ಪಾಸ್ತಾ ಹೆಚ್ಚಾದಲ್ಲಿ ಫ್ರಿಜ್ ನಲ್ಲಿಟ್ಟು ನಂತರ ಸಲಾಡ್ ಗಳಲ್ಲಿ ಬಳಸಬಹುದು.