ಸಂಜೆ ಸ್ನ್ಯಾಕ್ಸ್ ಗೆ ಪಾವ್ ಭಾಜಿ ತಿನ್ನಬೇಕು ಅನಿಸ್ತಿದೆಯಾ…? ಪಾವ್ ಭಾಜಿ ಮಸಾಲೆಯನ್ನು ಮನೆಯಲ್ಲಿಯೇ ಮಾಡುವ ಸುಲಭ ವಿಧಾನ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು:
½ ಟೀ ಸ್ಪೂನ್ – ಕಾಳುಮೆಣಸು, 25 – ಲವಂಗ, 12 – ಒಣಮೆಣಸು, 2 ಟೇಬಲ್ ಸ್ಪೂನ್ – ಜೀರಿಗೆ, 2 ½ ಟೇಬಲ್ ಸ್ಪೂನ್ – ಧನಿಯಾ, 1 ಟೇಬಲ್ ಸ್ಪೂನ್ – ಮೆಂತೆಕಾಳು, 6 ತುಂಡು – ಚಕ್ಕೆ, 1 – ಕಪ್ಪು ಏಲಕ್ಕಿ, 2 – ಪಲಾವ್ ಎಲೆ, 8 – ಕರಿಬೇವಿನ ಎಲೆ, ¼ ಟೀ ಸ್ಪೂನ್ – ಬ್ಲ್ಯಾಕ್ ಸಾಲ್ಟ್ , 1 ಟೇಬಲ್ ಸ್ಪೂನ್ – ಆಮಚೂರ್ ಪುಡಿ.
ಮಾಡುವ ವಿಧಾನ:
ಬ್ಲ್ಯಾಕ್ ಸಾಲ್ಟ್, ಆಮಚೂರ್ ಪುಡಿ, ಕರಿಬೇವು ಬಿಟ್ಟು ಎಲ್ಲವನ್ನೂ ಒಂದು ಪ್ಯಾನ್ ಗೆ ಹಾಕಿ ಸಣ್ಣ ಉರಿಯಲ್ಲಿ ಹುರಿದುಕೊಂಡು ತೆಗೆದಿಟ್ಟುಕೊಳ್ಳಿ. ಅದೇ ಪ್ಯಾನ್ ಗೆ ಕರಿಬೇವು ಹಾಕಿ ಗರಿ ಗರಿಯಾಗುವವರೆಗೆ ಹುರಿದುಕೊಳ್ಳಿ. ಇವೆಲ್ಲ ತಣ್ಣಗಾದ ಮೇಲೆ ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಿ. ನಂತರ ಇದಕ್ಕೆ ಆಮಚೂರ್ ಪೌಡರ್ ಹಾಗೂ ಬ್ಲ್ಯಾಕ್ ಸಾಲ್ಟ್ ಸೇರಿಸಿ ಪುಡಿ ಮಾಡಿಕೊಂಡು ಗಾಜಿನ ಡಬ್ಬದಲ್ಲಿ ತುಂಬಿಸಿಡಿ.