ಶುಕ್ರವಾರದಂದು ಎಸಿಬಿ, ಬಿಬಿಎಂಪಿ ಮೇಲೆ ದಾಳಿ ನಡೆಸಿತು. ಆನಂತರ ಇಂದು ಎಸಿಬಿ ಅಧಿಕಾರಿಗಳು, ಪಾಲಿಕೆಯ ಇಪ್ಪತ್ತೇಳು ಕಚೇರಿಗಳ ಮೇಲೆ ಎಸಿಬಿ ದಾಳಿ ಮುಂದುವರೆಸಿದ್ದಾರೆ. ಅಷ್ಟೇ ಅಲ್ಲಾ ನಾಳೆಯು ಸಹ ಪಾಲಿಕೆಗೆ ಸಂಬಂಧಿಸಿದ ಕಚೇರಿಗಳಲ್ಲಿ, ಕಡತಗಳನ್ನು ಪರಿಶೀಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಅಂದಹಾಗೇ ಎಸಿಬಿ ಪಾಲಿಕೆಯ ಮೇಲೆ ಶುಕ್ರವಾರ ದಾಳಿ ನಡೆಸಿ ಕೆಲವು ಕಡತಗಳನ್ನ ವಶಪಡಿಸಿಕೊಂಡಿತ್ತು. ಆದರೆ ಶನಿವಾರ, ಭಾನುವಾರ ರಜೆ ಇದ್ದ ಕಾರಣ ಇಂದು ಮತ್ತೆ ದಾಳಿ ನಡೆಸಿದೆ. ಬಿಬಿಎಂಪಿಯ ಹಲವು ವಿಭಾಗಗಳಲ್ಲಿ ಅವ್ಯವಹಾರ ನಡೆದಿದೆ. ಇದರಿಂದ ಸರ್ಕಾರಕ್ಕೆ ನಷ್ಟ ಉಂಟಾಗಿದ್ದು, ಖಾಸಗಿ ವ್ಯಕ್ತಿಗಳು ಹಾಗೂ ಅಧಿಕಾರಿಗಳಿಗೆ ಲಾಭವಾಗಿದೆ ಎಂಬ ಅನುಮಾನದ ಮೇಲೆ ಈ ದಾಳಿ ನಡೆಯುತ್ತಿದೆ.
ಮತ್ತೆ ಬೆಲೆ ಏರಿಕೆ ಬಿಸಿ: ನಾಳೆಯಿಂದಲೇ ದುಬಾರಿ ದುನಿಯಾ; ಹಾಲಿನ ದರ ಹೆಚ್ಚಳ, ಅಮುಲ್ ಹಾಲು ಲೀಟರ್ ಗೆ 2 ರೂ. ಏರಿಕೆ
ಎಸಿಬಿ ಅಧಿಕಾರಿಗಳು ಇಂದು ಮುಖ್ಯವಾಗಿ ಯೋಜನಾ ವಿಭಾಗದ ಕಡತಗಳನ್ನು ಪರಿಶೀಲಿಸಿದ್ದಾರೆ ಎಂದು ತಿಳಿದುಬಂದಿದೆ. ಟ್ಯಾಕ್ಸ್ ಕಲೆಕ್ಷನ್ ನಲ್ಲಿ ಭ್ರಷ್ಟಾಚಾರವಾಗಿದೆ ಎಂಬ ಮಾಹಿತಿಯು ಲಭ್ಯವಾಗಿದೆ. ಅಷ್ಟೇ ಅಲ್ಲದೆ, ಒಂದೇ ರಸ್ತೆಗೆ ಎರಡು ಬಾರಿ ದುರಸ್ಥಿ ಕಾರ್ಯ ನಡೆಸಿರುವುದು. ಕಟ್ಟಡಗಳಿಗೆ ಸರಿಯಾದ ಪ್ಲ್ಯಾನಿಂಗ್ ನೀಡದೇ ಹಣವನ್ನ ಪಡೆದಿರುವುದು. ಕೆರೆಗಳನ್ನ ಒತ್ತುವರಿ ಮಾಡಿ ಸೈಟ್ ಗಳನ್ನಾಗಿ ಮಾಡಿರುವ ವಿಚಾರ. ಜಾಹೀರಾತಿಗೆ ಸರಿಯಾದ ರೀತಿಯಲ್ಲಿ ಫಂಡ್ ಗಳನ್ನ ಕಲೆಕ್ಟ್ ಮಾಡದೇ ಇರೋದು. ರಸ್ತೆ ಟೆಂಡರ್ ಗಳಲ್ಲಿ ನೀಡಿದ ಮಾಹಿತಿ ಸರಿಯಿಲ್ಲದಿರುವುದು. ಹಾಗೆಯೇ TDR ನಲ್ಲೂ ಫಲಾನುಭವಿಗಳಿಗೆ ಹಣ-ಜಾಗ ನೀಡದೇ ಪಟ್ಟಭದ್ರ ಹಿತಾಸಕ್ತಿಗಳಿಗೆ ಹಂಚಿರುವ ವಿಚಾರ ಸೇರಿದಂತೆ, ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಹಲವು ದಾಖಲೆಗಳನ್ನ ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಈ ವಿಚಾರವಾಗಿ ನಾಳೆಯು ಕಡತಗಳನ್ನ ಪರಿಶೀಲಿಸುವ ಸಾಧ್ಯತೆ ಇದೆ. ಬೃಹತ್ ಪಾಲಿಕೆಯಲ್ಲಿ, ಸರಿಸುಮಾರು 200 ಕೋಟಿಗೂ ಅಧಿಕ ಭ್ರಷ್ಟಾಚಾರ ನಡೆದಿರುವ ಬಗ್ಗೆ ಎಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.