ಮಹಾನಗರ ಪಾಲಿಕೆಗಳ ಮೇಯರ್ ಗಳು ಗೌನ್ ಧರಿಸುವುದು ಇವರಿಗೆ ಒಂದು ಪದ್ಧತಿಯಾಗಿ ನಡೆದುಕೊಂಡು ಬಂದಿತ್ತು. ಆದರೆ ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ ಮಾಸಿಕ ಸಭೆಯಲ್ಲಿ ಗೌನ್ ಧರಿಸದೆ ಪಾಲ್ಗೊಂಡಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದ್ದರು.
ಅಲ್ಲದೆ ಸಭೆ ನಡೆಸಲು ಸಹ ಅವಕಾಶ ನೀಡದ ಹಿನ್ನೆಲೆಯಲ್ಲಿ ಅನಿರ್ದಿಷ್ಟ ಅವಧಿಗೆ ಸಭೆಯನ್ನು ಮುಂದೂಡಲಾಗಿತ್ತು. ಇದರ ಮಧ್ಯೆ ಸರ್ಕಾರಕ್ಕೆ ಪತ್ರ ಬರೆದಿದ್ದ ಮೇಯರ್ ಈರೇಶ ಅಂಚಟಗೇರಿ ಈ ಕುರಿತು ಸ್ಪಷ್ಟನೆ ನೀಡುವಂತೆ ಕೋರಿದ್ದರು.
ಇದೀಗ ನಗರಾಭಿವೃದ್ಧಿ ಇಲಾಖೆ ಜಂಟಿ ಕಾರ್ಯದರ್ಶಿಯವರು ಈ ಕುರಿತಂತೆ ಸ್ಪಷ್ಟನೆ ನೀಡಿದ್ದು, ಗೌನ್ ಧರಿಸುವುದು ಆಯಾ ಮಹಾನಗರ ಪಾಲಿಕೆಗಳ ಮಹಾಪೌರ ವಿವೇಚನೆಗೆ ಬಿಟ್ಟ ವಿಷಯವಾಗಿದೆ ಎಂದು ತಿಳಿಸಿದ್ದಾರೆ. ಹೀಗಾಗಿ ಇನ್ನು ಮುಂದೆ ಗೌನ್ ಧರಿಸುವುದು ಮಹಾಪೌರರಿಗೆ ಸೇರಿದ ನಿರ್ಧಾರವಾಗಿರುತ್ತದೆ.