ರೈಸ್ ಬಾತ್ ಅಥವಾ ರೋಟಿ ಮಾಡಿದಾಗ ರಾಯಿತ ಇದ್ದರೆ ತಿನ್ನಲು ಚೆನ್ನಾಗಿರುತ್ತದೆ. ಇಲ್ಲಿ ಸುಲಭವಾಗಿ ಮಾಡಬಹುದಾದ ಪಾಲಕ್ ರಾಯಿತ ಇದೆ ಒಮ್ಮೆ ಮಾಡಿ ನೋಡಿ.
ಬೇಕಾಗುವ ಸಾಮಗ್ರಿಗಳು:
500 ಗ್ರಾಂ-ಮೊಸರು, 1 ಟೇಬಲ್ –ಎಣ್ಣೆ, ½ ಟೀ ಸ್ಪೂನ್-ಜೀರಿಗೆ ಪುಡಿ, 2 ಕಪ್-ಪಾಲಕ್, 1 ಟೀ ಸ್ಪೂನ್-ಹಸಿಮೆಣಸು, ½ ಟೀಸ್ಪೂನ್-ಬ್ಲ್ಯಾಕ್ ಸಾಲ್ಟ್, ಉಪ್ಪು-ರುಚಿಗೆ ತಕ್ಕಷ್ಟು.
ಒಗ್ಗರಣೆಗೆ
1 ಟೇಬಲ್ ಸ್ಪೂನ್-ಎಣ್ಣೆ, ½ ಟೀ ಸ್ಪೂನ್-ಜೀರಿಗೆ, ½ ಟೀ ಸ್ಪೂನ್-ಸಾಸಿವೆ ಕಾಳು, 2-3-ಒಣ ಮೆಣಸು, 10-15-ಕರಿಬೇವು.
ಮಾಡುವ ವಿಧಾನ:
ಮೊದಲು ಮೊಸರನ್ನು ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಒಂದು ಪ್ಯಾನ್ ಗೆ ಎಣ್ಣೆ ಹಾಕಿ ಬಿಸಿ ಮಾಡಿ ಅದಕ್ಕೆ ಜೀರಿಗೆ ಹಾಕಿ ನಂತರ ಪಾಲಕ್ ಹಾಗೂ ಹಸಿಮೆಣಸು ಹಾಕಿ ಮುಚ್ಚಳ ಮುಚ್ಚಿ 5 ನಿಮಿಷಗಳ ಕಾಲ ಬೇಯಿಸಿ ಗ್ಯಾಸ್ ಆಫ್ ಮಾಡಿ.
ಇದು ತಣ್ಣಗಾದ ಮೇಲೆ ಇದನ್ನು ಮೊಸರಿಗೆ ಹಾಕಿ ಅದಕ್ಕೆ ಜೀರಿಗೆ ಪುಡಿ, ಬ್ಲ್ಯಾಕ್ ಸಾಲ್ಟ್, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಒಂದು ಪ್ಯಾನ್ ನಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಅದಕ್ಕೆ ಜೀರಿಗೆ, ಸಾಸಿವೆ, ಒಣಮೆಣಸು, ಕರಿಬೇವು ಹಾಕಿ ಒಗ್ಗರಣೆ ತಯಾರಿಸಿಕೊಂಡು ಅದನ್ನು ಮೊಸರಿನ ಮಿಶ್ರಣಕ್ಕೆ ಹಾಕಿದರೆ ರಾಯಿತಾ ರೆಡಿ.