ಪಶ್ಚಿಮ ಬಂಗಾಳದ ಶಿಕ್ಷಕರ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಮಾಜಿ ಸಚಿವ ಪಾರ್ಥ ಚಟರ್ಜಿ ಹಾಗೂ ಆತನ ಆಪ್ತೆ ಅರ್ಪಿತ ಮುಖರ್ಜಿ ಬಂಧನಕ್ಕೊಳಗಾಗಿದ್ದಾರೆ. ಪಾರ್ಥ ಚಟರ್ಜಿ ಬಂಧನದ ಬೆನ್ನಲ್ಲೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಅವರನ್ನು ಸಂಪುಟದಿಂದ ವಜಾಗೊಳಿಸಿದ್ದರ ಜೊತೆಗೆ ಪಕ್ಷದ ಎಲ್ಲ ಹುದ್ದೆಗಳಿಂದಲೂ ದೂರವಿಟ್ಟಿದ್ದಾರೆ.
ಇದರ ಮಧ್ಯೆ ಅರ್ಪಿತಾ ಮುಖರ್ಜಿ ಮನೆ ಮೇಲೆ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ, ಆಕೆಯ ಎರಡು ಮನೆಗಳಿಂದ ಒಟ್ಟು ಐವತ್ತು ಕೋಟಿ ರೂಪಾಯಿಗಳಿಗೂ ಅಧಿಕ ಹಣ ಸಿಕ್ಕಿರುವುದರ ಜೊತೆಗೆ ಲೈಂಗಿಕ ಆಟಿಕೆಗಳು, ವಿವಾಹಿತರಿಗೆ ನೀಡುವ ಬೆಳ್ಳಿ ಬಟ್ಟಲು ಮೊದಲಾದವು ಪತ್ತೆಯಾಗಿದ್ದು, ಇವು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಪಾರ್ಥ ಚಟರ್ಜಿ ಹಾಗೂ ಅರ್ಪಿತಾ ಮುಖರ್ಜಿಯವರ ಸಂಬಂಧವನ್ನು ಈ ವಸ್ತುಗಳು ದೃಢಪಡಿಸುತ್ತಿವೆ ಎನ್ನಲಾಗುತ್ತಿದ್ದು, ಇವರಿಬ್ಬರೂ ವಿವಾಹವಾಗಿದ್ದಾರಾ ಅಥವಾ ಲಿವ್ ಇನ್ ಸಂಬಂಧದಲ್ಲಿದ್ದರಾ ಎಂಬ ಪ್ರಶ್ನೆ ಮೂಡಿದೆ. ಮತ್ತೊಂದು ಮಹತ್ವದ ಸಂಗತಿ ಎಂದರೆ ಅರ್ಪಿತಾ ಮನೆಗೆ ಹಲವು ಡೂಪ್ಲಿಕೇಟ್ ಕೀಗಳಿದ್ದವು ಎನ್ನಲಾಗಿದ್ದು, ಪಾರ್ಥ ಚಟರ್ಜಿಯ ಕೆಲ ಆಪ್ತರು ಅಕ್ರಮ ಹಣವನ್ನು ಇಲ್ಲಿ ತಂದಿರಿಸುತ್ತಿದ್ದರು ಎನ್ನಲಾಗಿದೆ.