ಸ್ನೇಹಿತರು ಅಥವಾ ಕಂಪನಿ ಆಯೋಜಿಸಿದ ಪಾರ್ಟಿಯಲ್ಲಿ ಒಂದು ವೇಳೆ ನೀವು ಅಪಘಾತಕ್ಕೆ ಒಳಗಾದಾಗ ನೀವು ಯಾರನ್ನು ದೂಷಿಸುತ್ತೀರಿ ? ನಿಮ್ಮನ್ನು ಅಲ್ಲಿರಲು ಒತ್ತಾಯಿಸಿದ್ದಕ್ಕಾಗಿ ಅಥವಾ ಮುಗ್ಗರಿಸಿ ಬೀಳಲು ಕಾರಣರಾದವರನ್ನು ದೂಷಿಸುತ್ತೀರಾ ? ಇದೀಗ ಯುಕೆ ಉದ್ಯೋಗಿಯೊಬ್ಬರು ಲೆಕ್ಕಪರಿಶೋಧಕ ಸಂಸ್ಥೆಯಾದ ಪ್ರೈಸ್‌ವಾಟರ್‌ಹೌಸ್‌ಕೂಪರ್ಸ್ ವಿರುದ್ಧ 1 ಕೋಟಿ 89 ಲಕ್ಷ ರೂಪಾಯಿಗಳಿಗೆ ಮೊಕದ್ದಮೆ ಹೂಡುತ್ತಿದ್ದಾರೆ.
ಹೌದು, 28 ವರ್ಷದ ಉದ್ಯೋಗಿ, ಮೈಕೆಲ್ ಬ್ರಾಕಿ, ತನ್ನ ಮಿದುಳಿನ ಗಾಯದ ನಿರ್ಲಕ್ಷ್ಯದ ಆರೋಪಕ್ಕಾಗಿ ಸಂಸ್ಥೆಯ ವಿರುದ್ಧ ವೈಯಕ್ತಿಕ ದೂರನ್ನು ದಾಖಲಿಸಿದ್ದಾರೆ. 2019 ರ ಆರಂಭದಲ್ಲಿ ಮೈಕೆಲ್ ಕೋಮಾಕ್ಕೆ ಒಳಗಾಗಬೇಕಾಯ್ತು. ಈಗಲೂ ನಿರಂತರವಾದ ಅರಿವಿನ ರೋಗಲಕ್ಷಣಗಳನ್ನು ಅನುಭವಿಸುತ್ತಿದ್ದಾರಂತೆ. ಆಫೀಸ್ ಆಫ್ಟರ್-ಅವರ್ಸ್ ಈವೆಂಟ್‌ನಲ್ಲಿ ಸಂಭವಿಸಿದ ಅಪಘಾತದಿಂದಾಗಿ ಮೈಕೆಲ್ ತನ್ನ ಅರ್ಧ ತಲೆಬುರುಡೆಯನ್ನು ಕಳೆದುಕೊಂಡಿದ್ದಾರೆ.
ಪಬ್ ಗಾಲ್ಫ್ ಈವೆಂಟ್ ನಲ್ಲಿ ನಿರ್ದಿಷ್ಟ ರೀತಿಯ ಆಲ್ಕೋಹಾಲ್ ಕುಡಿಯುವುದನ್ನು ಒಳಗೊಂಡಿರುವ ಈವೆಂಟ್‌ಗೆ ಹಾಜರಾಗಲು ಪ್ರೋತ್ಸಾಹಿಸಲಾಗಿತ್ತು. ತಮ್ಮ ಪಾನೀಯವನ್ನು ಸೇವಿಸಲು ಕಡಿಮೆ ಸ್ವಿಗ್‌ಗಳನ್ನು ಬಳಸಿದವರಿಗೆ ಉತ್ತಮ ಅಂಕಗಳನ್ನು ನೀಡಲಾಯಿತು. ಸಂಜೆ 6 ಗಂಟೆಯಿಂದ ಹಲವು ಗಂಟೆಗಳ ಕಾಲ ಅತಿಯಾದ, ತ್ವರಿತ ಮತ್ತು ದೀರ್ಘಕಾಲದ ಆಲ್ಕೋಹಾಲ್ ಸೇವನೆಯ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು ಎಂದು ಮೊಕದ್ದಮೆಯಲ್ಲಿ ಬ್ರಾಕಿ ವಿವರಿಸಿದ್ದಾನೆ.
ಬ್ರಾಕಿ ರಾತ್ರಿ 10 ಗಂಟೆಯ ನಂತರ ನಡೆದ ಘಟನೆಗಳ ನೆನಪಿಲ್ಲದಷ್ಟು ಕುಡಿದಿದ್ದ. ಮತ್ತು ಕೆಳಗೆ ಬಿದ್ದ ನಂತರ ತಲೆಗೆ ತೀವ್ರ ಗಾಯವಾಗಿ ರಸ್ತೆಯ ಮೇಲೆ ಬಿದ್ದಿದ್ದರು. ಘಟನೆಯ ನಂತರ ಬ್ರಾಕಿಯ ಅರ್ಧ ತಲೆಬುರುಡೆಯನ್ನು ತೆಗೆದುಹಾಕಬೇಕಾಯಿತು. ಅಲ್ಲದೆ ತಲೆಯ ಗಾಯದಿಂದ ಚೇತರಿಸಿಕೊಂಡ ನಂತರ ಇದೊಂದು ಪವಾಡವೇ ಸರಿ ಅಂತಾ ವೈದ್ಯರು ಬಣ್ಣಿಸಿದ್ದರು. ಹೀಗಾಗಿ ಈತ ಕಂಪನಿ ವಿರುದ್ಧ ಮೊಕದ್ದಮೆ ಹೂಡಿದ್ದಾನೆ.