ಹೊಟ್ಟೆ ತುಂಬಾ ಊಟ ಮಾಡಿದ್ಮೇಲೆ ಪಾನ್ ಅಥವಾ ಬೀಡಾ ತಿನ್ನುವ ಅಭ್ಯಾಸ ಅನೇಕರಿಗಿದೆ. ಪಾನ್ ಆರೋಗ್ಯಕರವೆಂದು ಪರಿಗಣಿಸಲಾಗುತ್ತದೆ. ಬೀಡಾಕ್ಕೆ ಬಳಸುವ ವೀಳ್ಯದೆಲೆಯು ಗ್ಯಾಸ್ಟ್ರೋ-ರಕ್ಷಣಾತ್ಮಕ, ಕಾರ್ಮಿನೇಟಿವ್ ಮತ್ತು ಆಂಟಿ ಫ್ಲಾಟ್ಯುಲೆಂಟ್ ಗುಣಲಕ್ಷಣಗಳನ್ನು ಹೊಂದಿದೆ. ಇದು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಸುಧಾರಿಸುತ್ತದೆ.
ಈ ಕಾರಣಕ್ಕಾಗಿ ಊಟದ ನಂತರ ಪಾನ್ ತಿನ್ನುವ ಸಂಪ್ರದಾಯವಿದೆ. ಆದರೆ ಪಾನ್ ತಿಂದ ನಂತರ ಕೆಲವು ಪದಾರ್ಥಗಳನ್ನು ಅಪ್ಪಿತಪ್ಪಿಯೂ ತಿನ್ನಬಾರದು. ನೀವು ಈ ವಸ್ತುಗಳನ್ನು ಸೇವಿಸಿದರೆ ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು, ಹಾಗಾದರೆ ಪಾನ್ ತಿಂದ ನಂತರ ಏನೆಲ್ಲಾ ಪದಾರ್ಥಗಳನ್ನು ತಿನ್ನಬಾರದು ಎಂಬುದನ್ನು ತಿಳಿದುಕೊಳ್ಳೋಣ.
ಔಷಧಿ: ಪಾನ್ ತಿಂದ ನಂತರ ಯಾವುದೇ ಔಷಧಿಯನ್ನು ಸೇವನೆ ಮಾಡಬಾರದು. ಅಕಸ್ಮಾತ್ ಸೇವಿಸಿದ್ರೆ ಇದ್ದಕ್ಕಿದ್ದಂತೆ ತಲೆನೋವು ಅಥವಾ ಹೊಟ್ಟೆ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ವೀಳ್ಯದೆಲೆ ತಿಂದು ಕನಿಷ್ಠ ಅರ್ಧ ಅಥವಾ ಒಂದು ಗಂಟೆಯ ಬಳಿಕ ಔಷಧ ಸೇವನೆ ಮಾಡಿ. ಪಾನ್ ತಿಂದ ತಕ್ಷಣ ಔಷಧಿಯನ್ನು ತೆಗೆದುಕೊಂಡರೆ ಅದರಿಂದ ರಿಯಾಕ್ಷನ್ ಆಗಬಹುದು.
ಜ್ಯೂಸ್: ಪಾರ್ಟಿ ಅಥವಾ ಫಂಕ್ಷನ್‌ಗೆ ಹೋದಾಗ ಜ್ಯೂಸ್ ಮತ್ತು ಪಾನ್ ಎರಡೂ ಒಟ್ಟೊಟ್ಟಿಗೆ ಕಣ್ಸೆಳೆಯುತ್ತದೆ. ಹಾಗಾಗಿ ಪಾನ್ ತಿಂದುಕೊಂಡು ನಂತರ ಜ್ಯೂಸ್ ಕುಡಿಯುವವರೂ ಇರುತ್ತಾರೆ. ಆದ್ರೆ ಆ ರೀತಿ ಮಾಡಬೇಡಿ. ಮೊದಲು ಜ್ಯೂಸ್ ಕುಡಿಯಬೇಕು, ನಂತರ ಬೇಕಾದರೆ ಪಾನ್ ತಿನ್ನಿರಿ. ಪಾನ್ ತಿಂದ ನಂತರ ಜ್ಯೂಸ್ ಕುಡಿದರೆ, ಅದು ನಿಮಗೆ ಹಾನಿ ಮಾಡುತ್ತದೆ. ಏಕೆಂದರೆ ರಸದ ಪರಿಣಾಮವೂ ತಂಪಾಗಿರುತ್ತದೆ. ರಾತ್ರಿಯಲ್ಲಿ ಜ್ಯೂಸ್ ಕುಡಿಯುವುದರಿಂದ ನಿಮ್ಮ ಜೀರ್ಣಕ್ರಿಯೆಗೆ ಹಾನಿಯಾಗುತ್ತದೆ.
ಹಾಲು: ಪಾನ್ ತಿಂದ ನಂತರ ಹಾಲು ಕೂಡ ಕುಡಿಯಬಾರದು.ಇದರ ಜೊತೆಗೆ ಮಸಾಲೆಯುಕ್ತ ಪದಾರ್ಥಗಳನ್ನು ತಿನ್ನುವುದನ್ನು ತಪ್ಪಿಸಬೇಕು. ಪಾನ್ ಸೇವನೆಯ ಬಳಿಕ ಮಸಾಲೆಯುಕ್ತ ಆಹಾರವನ್ನು ತಿಂದರೆ ಅದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಹಾಳುಮಾಡುತ್ತದೆ. ವೀಳ್ಯದೆಲೆ ತಿಂದ ನಂತರ ಲವಂಗ, ಕಾಳುಮೆಣಸು ಅಥವಾ ಕೆಂಪು ಮೆಣಸಿನಕಾಯಿಯನ್ನು ಸೇವಿಸಬೇಡಿ.