ಬೇಸಿಗೆಯಲ್ಲಿ ಬೆವರುವುದು ಸಾಮಾನ್ಯವಾಗಿದೆ. ಕೆಲವರಿಗೆ ಪಾದಗಳಲ್ಲಿ ಹೆಚ್ಚು ಬೆವರು ಬರುತ್ತದೆ. ಇದರಿಂದ ಪಾದದಲ್ಲಿ ಶಿಲೀಂಧ್ರ ಸೋಂಕು ಉಂಟಾಗಿ ವಾಸನೆ ಬರಲು ಕಾರಣವಾಗುತ್ತದೆ. ಈ ವಾಸನೆಯನ್ನು ನೈಸರ್ಗಿಕವಾಗಿ ನಿವಾರಿಸಲು ಹೀಗೆ ಮಾಡಿ.
*ಪಾದದ ವಾಸನೆಯನ್ನು ನಿವಾರಿಸಲು ಆ್ಯಪಲ್ ಸೈಡರ್ ವಿನೆಗರ್ ಬಳಸಿ. ಒಂದು ಬಕೆಟ್ ಉಗುರು ಬೆಚ್ಚಗಿನ ನೀರಿಗೆ 2 ಚಮಚ ಆ್ಯಪಲ್ ಸೈಡರ್ ವಿನೆಗರ್, 1ಚಮಚ ಮೌತ್ ವಾಶ್, 1 ಚಮಚ ಉಪ್ಪು ಹಾಕಿ ಮಿಕ್ಸ್ ಮಾಡಿ ಅದರಲ್ಲಿ ನಿಮ್ಮ ಪಾದಗಳನ್ನು 30 ನಿಮಿಷಗಳ ಕಾಲ ಮುಳುಗಿಸಿ ಇಡಿ. ಬಳಿಕ ಸ್ಕ್ರಬರ್ ನಿಂದ ಪಾದಗಳನ್ನು ಸ್ವಚ್ಛಗೊಳಿಸಿ. ಇದನ್ನು ವಾರದಲ್ಲಿ 2-3 ಬಾರಿ ಮಾಡಿ ನೋಡಿ.
*ಹಾಗೇ 1 ಟಬ್ ಉಗುರು ಬೆಚ್ಚಗಿನ ನೀರಿಗೆ 2 ಚಮಚ ನಿಂಬೆ ರಸ, 1 ಚಮಚ ರೋಸ್ ವಾಟರ್, 5 ಹನಿ ಗುಲಾಬಿ ಎಸೆನ್ಷಿಯಲ್ ಆಯಿಲ್ ಹಾಕಿ ಮಿಕ್ಸ್ ಮಾಡಿ ಅದರಲ್ಲಿ ಪಾದಗಳನ್ನು 15 ನಿಮಿಷಗಳ ಕಾಲ ನೆನೆಸಿಡಿ. ಕೊನೆಗೆ ನಿಂಬೆ ಸಿಪ್ಪೆಯಿಂದ ಪಾದಗಳನ್ನು ಚೆನ್ನಾಗಿ ಉಜ್ಜಿ ತೊಳೆಯಿರಿ. ಇದನ್ನು ವಾರದಲ್ಲಿ 2-3 ಬಾರಿ ಮಾಡಿದರೆ ವಾಸನೆ ನಿವಾರಣೆಯಾಗುತ್ತದೆ.