ಕಾಲಿನ ಪಾದಗಳ ಉರಿಗೆ ಕೊತ್ತಂಬರಿ ಬೀಜದ ಪಾನೀಯವನ್ನು ಒಮ್ಮೆ ಉಪಯೋಗಿಸಿ ನೋಡಿ. ದೇಹದ ಉಷ್ಣತೆಯಿಂದ ಪಾರಾಗಿ, ಪಾದಗಳು ಉರಿಯುವ ಸಮಸ್ಯೆಯಿಂದ ಮುಕ್ತಿ ದೊರೆಯುವುದನ್ನು ನೋಡಿ.
ಒಂದು ಪಾತ್ರೆಗೆ ಎರಡು ಚಮಚ ಕೊತ್ತಂಬರಿ ಕಾಳು ಹಾಗೂ ಜೀರಿಗೆಯನ್ನು ಹಾಕಿ. ಎರಡು ನಿಮಿಷ ಚೆನ್ನಾಗಿ ಹುರಿಯಿರಿ. ಕೊತ್ತಂಬರಿ ಬೀಜ ದೇಹದ ಆಂತರಿಕ ಉಷ್ಣತೆಯನ್ನು ಕಡಿಮೆ ಮಾಡಿದರೆ ಜೀರಿಗೆಯೂ ದೇಹವನ್ನು ತಂಪಾಗಿಡುತ್ತದೆ.
ಇವೆರಡನ್ನು ಮಿಕ್ಸಿಯಲ್ಲಿ ರುಬ್ಬಿ. ಏರ್ ಟೈಟ್ ಕಂಟೇನರ್ ನಲ್ಲಿ ಶೇಖರಣೆ ಮಾಡಿ. ಒಂದು ಲೋಟ ನೀರಿಗೆ ಒಂದು ಚಮಚ ಪುಡಿ ಹಾಕಿ. ನಂತರ ಅರ್ಧ ಲೋಟ ಆಗುವವರೆಗೆ ಕುದಿಸಿ, ಸೋಸಿ ಈ ಪಾನೀಯವನ್ನು ಕಾಲು, ಪಾದ, ಕೈಗಳ ಉರಿ ಇದ್ದವರು ಮಾತ್ರ ಇದನ್ನು ಕುಡಿಯುವುದಲ್ಲದೇ ಅಜೀರ್ಣ ಸಮಸ್ಯೆಯಿಂದ ಬಳಲುವವರು ಕೂಡ ಸೇವನೆ ಮಾಡಬಹುದು.
ಇದಕ್ಕೆ ಸ್ವಲ್ಪ ಕೆಂಪು ಕಲ್ಲು ಸಕ್ಕರೆಯನ್ನು ಹಾಕಿಕೊಳ್ಳಬಹುದು. ಇದನ್ನು ಬೆಳಿಗ್ಗೆ ಅಥವಾ ರಾತ್ರಿ ಒಂದು ಬಾರಿ ಸೇವನೆ ಮಾಡಬಹುದು. ಉಪಹಾರ ಮಾಡಿದ ನಂತರ ಕುಡಿಯುವುದು ಉತ್ತಮ. ಹೀಗೆ ಒಂದು ವಾರ ಮಾಡುತ್ತಾ ಬಂದರೆ ದಿನದಿಂದ ದಿನಕ್ಕೆ ಪಾದಗಳ ಉರಿ, ಕೈಗಳ ಉರಿ ಎಲ್ಲವೂ ಕಡಿಮೆಯಾಗುತ್ತದೆ.