ದೇಹದ ಎಲ್ಲಾ ಭಾಗಗಳ ಆರೈಕೆ ಮಾಡುವ ನಾವು ನಮ್ಮ ಪಾದದ ಕಡೆಗೆ ಅಷ್ಟಾಗಿ ಗಮನ ಹರಿಸುವುದಿಲ್ಲ. ಹಾಗಾಗಿ ಪಾದಗಳನ್ನು ಆರೋಗ್ಯವಾಗಿರಲು ಈ ವಿಧಾನವನ್ನು ಅನುಸರಿಸಿ.
1.ಸ್ನಾನ ಮಾಡಿದ ಬಳಿಕ ದೇಹವನ್ನು ಒರೆಸಿಕೊಳ್ಳುವ ಜೊತೆಗೆ ಪಾದಗಳನ್ನು ಸ್ವಚ್ಛವಾಗಿ ಒರೆಸಿಕೊಳ್ಳಿ. ಇದರಿಂದ ಪಾದಗಳು ಶಿಲೀಂಧ್ರ ಸೋಂಕಿಗೆ ಒಳಗಾಗುವುದು ತಪ್ಪುತ್ತದೆ. ಪಾದಗಳ ವಾಸನೆ ನಿವಾರಣೆಯಾಗುತ್ತದೆ.
2.ಉಗುರುಗಳನ್ನು ಸರಿಯಾಗಿ ಕತ್ತರಿಸದಿದ್ದಾಗ ಉಗುರುಸುತ್ತು ಕಾಣಿಸಿಕೊಳ್ಳುತ್ತದೆ. ಹಾಗಾಗಿ ಉಗುರುಗಳನ್ನು ಸರಿಯಾಗಿ ಕತ್ತರಿಸಿಕೊಳ್ಳಿ.
3.ಉಗುರುಗಳನ್ನು ಆರೋಗ್ಯವಾಗಿಡಲು 20 ನಿಮಿಷಗಳ ಕಾಲ ಉಪ್ಪು ನೀರಿನಲ್ಲಿ ಪಾದಗಳನ್ನು ನೆನೆಸಿಡಿ. ಇದರಿಂದ ಪಾದಗಳಲ್ಲಾದ ಸೋಂಕು, ಗಾಯಗಳನ್ನು ನಿವಾರಣೆಯಾಗುತ್ತದೆ.
4.ಪಾದವನ್ನು ಯಾವಾಗಲೂ ಸುಂದರವಾಗಿ ಕಾಣಲು ಮಾಯಿಶ್ಚರೈಸರ್ ನ್ನು ಹಚ್ಚಿ. ಇದು ಪಾದಗಳು ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ.