ಪಾದಗಳಲ್ಲಿ ಊತ ಬರುವುದು ಸಾಮಾನ್ಯ ಸಮಸ್ಯೆಯಾಗಿದೆ. ಇದು ಅನೇಕ ಕಾರಣಗಳಿಂದ ಉಂಟಾಗಬಹುದು. ಆದರೆ ಪಾದಗಳು ಊದಿಕೊಂಡಾಗ ರೋಗಿಯು ಬಹಳಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ದೈನಂದಿನ ಜೀವನದ ಸಾಮಾನ್ಯ ಚಟುವಟಿಕೆಗಳನ್ನು ಮಾಡಲು ಕಷ್ಟವಾಗುತ್ತದೆ.
ಊತದಿಂದಾಗಿ ಪಾದಗಳಲ್ಲಿ ಸಾಕಷ್ಟು ನೋವು ಇರುತ್ತದೆ. ಕೆಲವೊಮ್ಮೆ ಪಾದಗಳ ಚರ್ಮವೂ ಒಣಗಲು ಪ್ರಾರಂಭಿಸುತ್ತದೆ. ಇದಕ್ಕಾಗಿ ಗಾಬರಿಪಡಬೇಕಾಗಿಲ್ಲ. ನಿಮ್ಮ ಅಡುಗೆ ಮನೆಯಲ್ಲೇ ಲಭ್ಯವಿರುವ ಕೆಲವೊಂದು ಮನೆಮದ್ದುಗಳನ್ನು ಮಾಡಬೇಕು.
1. ಸಾಸಿವೆ ಎಣ್ಣೆ: ಅಡುಗೆ ಮತ್ತು ಕೂದಲಿಗೆ ಸಾಸಿವೆ ಎಣ್ಣೆಯನ್ನು ನೀವು ಅನೇಕ ಬಾರಿ ಬಳಸಿರಬೇಕು. ಆದರೆ ಸಾಸಿವೆ ಎಣ್ಣೆಯ ಸಹಾಯದಿಂದ ಪಾದಗಳ ಊತವನ್ನು ಸಹ ಕಡಿಮೆ ಮಾಡಬಹುದು. ನೀವು ಸಾಸಿವೆ ಎಣ್ಣೆಯನ್ನು ತೆಗೆದುಕೊಂಡು ಊತ ಇರುವ ಕಡೆ ಲಘುವಾಗಿ ಮಸಾಜ್ ಮಾಡಿ. ಹೀಗೆ ಮಾಡುವುದರಿಂದ ಊತದಿಂದ ತ್ವರಿತ ಪರಿಹಾರ ದೊರೆಯುತ್ತದೆ.
2. ನಿಂಬೆ ರಸ : ನಿಂಬೆ ರಸ ದಿವ್ಯ ಔಷಧವಿದ್ದಂತೆ. ಅನೇಕ ಆರೋಗ್ಯ ಸಮಸ್ಯೆಗಳಿಗೆ ಇದು ರಾಮಬಾಣ. ಕಾಲುಗಳಲ್ಲಿ ಊತ ಮತ್ತು ನೋವು ಇದ್ದರೆ ನಿಂಬೆ ರಸವನ್ನು ಹಚ್ಚಿ ನಿಧಾನವಾಗಿ ಮಸಾಜ್ ಮಾಡಿ. ಹೀಗೆ ಮಾಡುವುದರಿಂದ ನೋವು ಬೇಗ ಮಾಯವಾಗುತ್ತದೆ.
3. ಅರಿಶಿನ: ಅರಿಶಿನ ನಾವು ಪ್ರತಿನಿತ್ಯದ ಅಡುಗೆಗೆ ಬಳಸುವ ಮಸಾಲೆ ಪದಾರ್ಥಗಳಲ್ಲೊಂದು. ಇದು ಪಾದಗಳ ಊತವನ್ನು ತೊಡೆದುಹಾಕಲು ತುಂಬಾ ಪರಿಣಾಮಕಾರಿಯಾಗಿದೆ. ಸ್ವಲ್ಪ ಆಲಿವ್ ಎಣ್ಣೆಗೆ ಒಂದು ಚಮಚ ಅರಿಶಿನವನ್ನು ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ಊತ ಇರುವ ಜಾಗದಲ್ಲಿ ಹಚ್ಚಿಕೊಳ್ಳಿ. ಸುಮಾರು 2 ಗಂಟೆಗಳ ಅದನ್ನು ಹಾಗೇ ಬಿಡಿ. ನಂತರ ಬೆಚ್ಚಗಿನ ನೀರಿನಿಂದ ಪಾದಗಳನ್ನು ತೊಳೆದುಕೊಳ್ಳಿ. ಹೀಗೆ ಮಾಡುವುದರಿಂದ ಊತ ಕಡಿಮೆಯಾಗುತ್ತದೆ.