ಸಕ್ಕರೆ ಕಾಯಿಲೆ ಅತ್ಯಂತ ಅಪಾಯಕಾರಿ. ಒಮ್ಮೆ ಅಂಟಿಕೊಂಡ್ರೆ ಜೀವನ ಪೂರ್ತಿ ಬೆನ್ನಟ್ಟುತ್ತದೆ. ಹಾಗಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನೀವು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಮಧುಮೇಹವನ್ನು ಸರಿಯಾದ ಸಮಯದಲ್ಲಿ ಪತ್ತೆ ಮಾಡಿದ್ರೆ ಸುಲಭವಾಗಿ ನಿಭಾಯಿಸಬಹುದು.
ದೇಹದ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಳದಿಂದಾಗಿ ಟೈಪ್ 1 ಮಧುಮೇಹ, ಟೈಪ್ 2 ಮಧುಮೇಹ, ಪ್ರಿಡಿಯಾಬಿಟಿಸ್ ಮತ್ತು ಗರ್ಭಾವಸ್ಥೆಯ ಮಧುಮೇಹದಂತಹ ಸಮಸ್ಯೆಗಳನ್ನು ಎದುರಿಸಬಹುದು. ಇವೆಲ್ಲದರ ಲಕ್ಷಣಗಳು ಒಂದಕ್ಕೊಂದು ಹೋಲುತ್ತವೆ. ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾದಾಗ, ನಿಮ್ಮ ಪಾದಗಳಲ್ಲಿ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅವುಗಳನ್ನು ಗುರುತಿಸುವುದು ಬಹಳ ಮುಖ್ಯ.
ಪಾದಗಳಲ್ಲಿ ಚರ್ಮದ ಸಮಸ್ಯೆ : ಪಾದಗಳ ಅಡಿಭಾಗ ಮತ್ತು ಕಾಲ್ಬೆರಳುಗಳ ನಡುವಿನ ಚರ್ಮವನ್ನು ಸ್ಪರ್ಶಿಸಲು ಕಷ್ಟವಾಗಿದ್ದರೆ ಅದು ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಾಗಿದೆ ಎಂಬುದರ ಸಂಕೇತವಿರಬಹುದು. ಕೂಡಲೇ ನೀವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸಬೇಕು.
ಅಥ್ಲೀಟ್ಸ್ ಫೂಟ್ : ನಿಮ್ಮ ರಕ್ತದಲ್ಲಿ ಸಕ್ಕರೆಯ ಮಟ್ಟ ಹೆಚ್ಚಿದ್ದರೆ ನಿಮಗೆ ಅಥ್ಲೀಟ್ಸ್ ಫೂಟ್ ಉಂಟಾಗಬಹುದು. ಅಥ್ಲೀಟ್ಸ್ ಫೂಟ್ ಇತರ ಕಾರಣಗಳಿಂದಲೂ ಕಾಣಿಸಿಕೊಳ್ಳುತ್ತದೆ. ಸಕ್ಕರೆ ಕಾಯಿಲೆ ಇದಕ್ಕೆ ಪ್ರಮುಖ ಕಾರಣ. ತುರಿಕೆ, ಕೆಂಪಗಾಗುವುದು, ಚರ್ಮದ ಬಿರುಕುಗಳು ಮತ್ತು ಶಿಲೀಂಧ್ರಗಳ ಸೋಂಕು ಉಂಟಾಗುತ್ತದೆ.
ಕಾಲ್ಬೆರಳ ಉಗುರುಗಳಿಗೆ ಶಿಲೀಂಧ್ರ ಸೋಂಕು: ನಿಮ್ಮ ಕಾಲುಗಳ ಉಗುರುಗಳಲ್ಲಿ ಶಿಲೀಂಧ್ರಗಳ ಸೋಂಕು ಗಮನಕ್ಕೆ ಬಂದರೆ ಮಧುಮೇಹದ ಸೂಚನೆಯೂ ಆಗಿರಬಹುದು. ಸಕ್ಕರೆ ಕಾಯಿಲೆ ಬಂದಿದ್ದರೆ ಕಾಲ್ಬೆರಳ ಉಗುರುಗಳ ಬಣ್ಣ ಬದಲಾಗುತ್ತದೆ. ಉಗುರುಗಳು ಕಪ್ಪು ಬಣ್ಣಕ್ಕೆ ತಿರುಗಬಹುದು, ವಕ್ರವಾಗಬಹುದು. ಗಾಯದಿಂದಾಗಿ ಸಹ ಉಗುರಿನಲ್ಲಿ ಶಿಲೀಂಧ್ರಗಳ ಸೋಂಕು ಸಂಭವಿಸಬಹುದು.