
ಅಡುಗೆ ಮಾಡುವಾಗ ಪಾತ್ರೆ ತಳ ಹಿಡಿದು ಸೀದು ಹೋಗುವುದು ಸಾಮಾನ್ಯ. ಕೆಲವೊಮ್ಮೆ ಗ್ಯಾಸ್ ಮೇಲೆ ಪಾತ್ರೆ ಇಟ್ಟಿರುವುದನ್ನು ಮರೆತು ಬಿಟ್ಟಿರುತ್ತೇವೆ ಅಥವಾ ಗ್ಯಾಸ್ ಉರಿ ಜೋರಾಗಿ ಇಟ್ಟ ಕಾರಣದಿಂದಲೂ ಪಾತ್ರೆ ತಳ ಸೀದು ಹೋಗಿರುತ್ತದೆ. ಇದನ್ನು ತಿಕ್ಕಿ ಮೊದಲಿನಂತೆ ಮಾಡುವುದು ದೊಡ್ಡ ಸವಾಲಿನ ಕೆಲಸ. ಇಲ್ಲಿ ಸುಲಭವಾಗಿ ಕ್ಲೀನ್ ಮಾಡುವ ವಿಧಾನ ಇದೆ ಟ್ರೈ ಮಾಡಿ.
ಬೇಕಿಂಗ್ ಸೋಡಾ 1 ಚಮಚದಷ್ಟು ತೆಗೆದುಕೊಳ್ಳಿ. ಹಾಗೇ ಅದಕ್ಕೆ 3 ಹನಿಯಷ್ಟು ಡಿಶ್ ವಾಶ್ ಲಿಕ್ವಿಡ್ ಹಾಕಿ ಸೀದು ಹೋದ ಕಡೆ ಚೆನ್ನಾಗಿ ಹಚ್ಚಿ. ನಂತರ 1 ಲೋಟ ಬಿಸಿ ನೀರು ಆ ಪಾತ್ರೆಗೆ ಹಾಕಿ 15 ನಿಮಿಷಗಳ ಕಾಲ ನೆನೆಸಿಡಿ. ಒಂದು ಬ್ರೆಷ್ ನ ಸಹಾಯದಿಂದ ನಿಧಾನಕ್ಕೆ ತಿಕ್ಕಿದರೆ ಪಾತ್ರೆ ಕ್ಲೀನ್ ಆಗುತ್ತದೆ.
ಇನ್ನು 1 ಚಮಚ ಲಿಂಬೆಹಣ್ಣಿನ ರಸ, 1 ಚಮಚ ವಿನೇಗರ್, 1 ಚಮಚ ಬೇಕಿಂಗ್ ಸೋಡಾವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಇದಕ್ಕೆ 2 ಹನಿ ಡಿಶ್ ವಾಶ್ ಲಿಕ್ವಿಡ್ ಸೇರಿಸಿ ಮಿಕ್ಸ್ ಮಾಡಿ ಇದರಿಂದ ತಿಕ್ಕಿದರೂ ಕೂಡ ಪಾತ್ರೆಯ ಸೀದ ಕಲೆಗಳೆಲ್ಲಾ ಹೋಗುತ್ತದೆ.