alex Certify ಪಾತ್ರೆ‌ ತೊಳೆಯಲು ಹೇಳಿದ ತಾಯಿಯನ್ನ ಬಾಣಲೆಯಿಂದ ಹೊಡೆದು ಸಾಯಿಸಿದ‌ ಅಪ್ರಾಪ್ತ ಬಾಲಕಿ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾತ್ರೆ‌ ತೊಳೆಯಲು ಹೇಳಿದ ತಾಯಿಯನ್ನ ಬಾಣಲೆಯಿಂದ ಹೊಡೆದು ಸಾಯಿಸಿದ‌ ಅಪ್ರಾಪ್ತ ಬಾಲಕಿ…..!

ನಾವು ಬದುಕಿರುವುದಕ್ಕೆ, ನಾವು ಉಸಿರಾಡುತ್ತಿರುವುದಕ್ಕೆ, ನಾವು ಈ ಪ್ರಪಂಚದಲ್ಲಿರುವುದಕ್ಕೆ ಕಾರಣ ತಾಯಿ. ಆದರೆ ಕಾಲ ಎಷ್ಟು ಬದಲಾಗಿದೆ ಎಂದರೆ ಕೆಲ ಪಾಪಿಗಳು ಜೀವ ಕೊಟ್ಟವಳ ಜೀವವನ್ನೇ ತೆಗೆಯುವ ಹಲವು ಪ್ರಕರಣಗಳನ್ನು ಕಂಡಿದ್ದೇವೆ. ಇಲ್ಲೊಬ್ಬ ಮಗಳು ಕ್ಷುಲ್ಲಕ ಕಾರಣಕ್ಕೆ ತನ್ನ ತಾಯಿಯನ್ನು ಒಡೆದು ಸಾಯಿಸಿದ್ದಾಳೆ.

ಹೌದು, 14 ವರ್ಷದ ಬಾಲಕಿಯೊಬ್ಬಳು ಪಾತ್ರೆ ತೊಳೆಯಲು ಹೇಳಿದ ತನ್ನ ತಾಯಿಯ ಮೇಲೆ ಬಾಣಲೆಯಿಂದ ಹಲ್ಲೆ ನಡೆಸಿ ಕೊಂದಿರುವ ಘಟನೆ ದೆಹಲಿಯ ನೋಯ್ಡಾದಲ್ಲಿ ನಡೆದಿದೆ. ಅಪ್ರಾಪ್ತ ಬಾಲಕಿಯ ಮೇಲೆ ಸೆಕ್ಷನ್ 304 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಇದರ ಅಡಿಯಲ್ಲಿ ಅಪರಾಧಿಯನ್ನ ಸುಧಾರಣಾ ಗೃಹಕ್ಕೆ ಕಳುಹಿಸಲಾಗಿದೆ. ಇದರಿಂದ ಅಪರಾಧಿ ನರಹತ್ಯೆ ಕೊಲೆಯ ಪ್ರಕರಣ ಎದುರಿಸುತ್ತಿಲ್ಲಾ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನೋಯ್ಡಾದ ಸೆಕ್ಟರ್ 77ರ ಅಪಾರ್ಟ್‌ಮೆಂಟ್ ಒಂದರಲ್ಲಿ ವಾಸವಿದ್ದ ಹುಡುಗಿ, ಕಳೆದ ಭಾನುವಾರ ರಾತ್ರಿ ತಮ್ಮ ತಾಯಿಗೆ ಗಾಯವಾಗಿದೆ ಎಂದು ಹೇಳಿ ನೆರೆಹೊರೆಯವರ ಸಹಾಯ ಕೋರಿದ್ದಾಳೆ. ಮನೆಗೆ ಬಂದ ನೆರೆಹೊರೆಯವರು, ಮಹಿಳೆಯ ತಲೆಗೆ ಗಾಯವಾಗಿ ಸಾಕಷ್ಟು ರಕ್ತ ಹೋಗಿರುವುದನ್ನ ನೋಡಿ ಗಾಭರಿಗೊಂಡು, ತಕ್ಷಣ ಆಕೆಯನ್ನ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಅವರು ಸಾವನ್ನಪ್ಪಿದ್ದಾರೆಂದು ಘೋಷಿಸಲಾಯಿತು.

ಮೃತ ಮಹಿಳೆಯನ್ನು 35-37 ವರ್ಷದವಳೆಂದು ಗುರುತಿಸಲಾಗಿದೆ. ಆಕೆ‌ ಗ್ರೇಟರ್ ನೋಯ್ಡಾದ ಕಂಪನಿಯೊಂದರಲ್ಲಿ ಸರಬರಾಜು ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಳು. ಮದುವೆಯಾದ ಐದು ವರುಷದಲ್ಲೆ ಪತಿಯಿಂದ‌ ದೂರವಾದ ಆಕೆ ತನ್ನ ಮಗಳೊಂದಿಗೆ ವಾಸವಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆ ತನ್ನ ಮಗಳಿಗೆ ಪಾತ್ರೆಗಳನ್ನು ತೊಳೆಯಲು ಹೇಳಿದ್ದಳು, ಆಕೆ ತಾಯಿ‌ಯ ಮಾತು‌ ಕೇಳದೆ ಹಠ ಮಾಡಿದ್ದಾಳೆ.‌ ಇದರಿಂದ ಕೋಪಗೊಂಡ ತಾಯಿ ಮಗಳನ್ನ ಗದರಿಸಿದ್ದಾಳೆ, ನಂತರ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಹುಡುಗಿ ತನ್ನ ತಾಯಿ ತಲೆಗೆ ಬಾಣಲೆಯಿಂದ ಹಲವಾರು ಬಾರಿ ಹೊಡೆದಿದ್ದಾಳೆಂದು ಹಿರಿಯ ಪೊಲೀಸ್ ಅಧಿಕಾರಿ ರಣವಿಜಯ್ ಸಿಂಗ್ ತಿಳಿಸಿದ್ದಾರೆ.‌

ತಾನು ವಾಕಿಂಗ್‌ನಿಂದ ಹಿಂತಿರುಗಿದಾಗ ನನ್ನ ತಾಯಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು ಎಂದು ಆರಂಭದಲ್ಲಿ ಬಾಲಕಿ, ಪೊಲೀಸರಿಗೆ ತಿಳಿಸಿದ್ದಳು. ಆದರೆ ಪೊಲೀಸರು ಅಕ್ಕಪಕ್ಕದವರನ್ನು ವಿಚಾರಿಸಿ ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿರುವ ಸಿಸಿ ಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಹೊರಗಿನವರು ಪ್ರವೇಶಿಸಿದ ಲಕ್ಷಣ ಕಂಡುಬಂದಿಲ್ಲ. ಅನುಮಾನಗೊಂಡ‌ ಪೊಲೀಸರು ಬಾಲಕಿಯನ್ನು ತಮ್ಮ ದಾಟಿಯಲ್ಲಿ ವಿಚಾರಿಸಿದಾಗ, ಸತ್ಯ ಒಪ್ಪಿಕೊಂಡಿದ್ದಾಳೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...