ಗುರುತಿಸಲು ಅಸಾಧ್ಯವಾದ ಹಾರುವ ವಸ್ತುವೊಂದು ಪಾಕಿಸ್ತಾನದ ನಗರವೊಂದರಲ್ಲಿ ಹಾರಾಡುತ್ತಿರುವ ದೃಶ್ಯವೊಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು ವಿಜ್ಞಾನಿಗಳು ಹಾಗೂ ಅಧಿಕಾರಿಗಳನ್ನು ದಿಗ್ಬ್ರಮೆಗೊಳಿಸಿದೆ.
ಪ್ರತ್ಯಕ್ಷದರ್ಶಿಗಳು ನೀಡಿರುವ ಮಾಹಿತಿಯ ಪ್ರಕಾರ ತ್ರಿಕೋನ ಆಕಾರದ ಈ ಅಸಾಮಾನ್ಯ ವಸ್ತುವು ಇಸ್ಲಾಮಾಬಾದ್ನಲ್ಲಿ ಎರಡು ಗಂಟೆಗಳ ಕಾಲ ಹಾರಾಡಿದೆ ಎಂದು ಹೇಳಿದ್ದಾರೆ.
33 ವರ್ಷ ವಯಸ್ಸಿನ ಅರ್ಸ್ಲಾನ್ ವಾರೈಚ್ ಇಸ್ಲಾಮಾಬಾದ್ನಲ್ಲಿ ಎರಡು ಗಂಟೆಗಳ ಕಾಲ ಹಾರಾಡಿದ ತ್ರಿಕೋನ ಆಕಾರವನ್ನು ವೀಕ್ಷಿಸಿದ್ದಾರೆ. ಅಲ್ಲದೇ ಅವರೇ ಈ ವಿಡಿಯೋವನ್ನು ಚಿತ್ರೀಕರಿಸಿದ್ದು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.
ಇದು ನಾಗರಿಕರು ಈವರೆಗೆ ದಾಖಲಿಸಿದ ಅತ್ಯಂತ ದೀರ್ಘಾವದಿಯ ಯುಎಫ್ಓ ಆಗಿದೆ ಎಂದು ಅಂದಾಜಿಸಲಾಗಿದೆ. ನಾನು ಡ್ರೋನ್ ಕೆಳಗಿಳಿಸುವಾಗ ಇದನ್ನು ನೋಡಿದೆ. ಕತ್ತಲಾದ ಬಳಿಕ ಇದನ್ನು ನನಗೆ ನೋಡಲು ಸಾಧ್ಯವಾಗಲಿಲ್ಲ ಎಂದು ವಾರೈಚ್ ಹೇಳಿದ್ದಾರೆ .