
ಪಾಕಿಸ್ತಾನ ತಂಡ ಅದೃಷ್ಟವಶಾತ್ ಟಿ20 ವಿಶ್ವಕಪ್ ಸೆಮಿಫೈನಲ್ ತಲುಪಿದೆ. ಪಾಕ್ ತಂಡದಲ್ಲಿ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಅವರಂತಹ ಅಪಾಯಕಾರಿ ಆರಂಭಿಕ ಜೋಡಿಗಳಿದ್ದಾರೆ. ಇನ್ನೊಂದು ವಿಶೇಷ ಅಂದ್ರೆ ಪಾಕಿಸ್ತಾನಿ ತಂಡದ 15 ಆಟಗಾರರಲ್ಲಿ 9 ಆಟಗಾರರಿಗೆ ಇನ್ನೂ ಮದುವೆಯಾಗಿಲ್ಲ.
ಅವಿವಾಹಿತ ಆಟಗಾರರ ಪೈಕಿ 28ರ ಹರೆಯದ ನಾಯಕ ಬಾಬರ್ ಅಜಮ್ ಕೂಡ ಒಬ್ಬರು. ವಿಶ್ವದ ಬೆಸ್ಟ್ ಬ್ಯಾಟ್ಸ್‌ಮನ್‌ಗಳ ಪೈಕಿ ಬಾಬರ್ ಅಜಮ್‌ಗೂ ವಿಶೇಷ ಸ್ಥಾನವಿದೆ. ಪಾಕಿಸ್ತಾನ ತಂಡಕ್ಕೆ ಹಲವು ಪಂದ್ಯಗಳನ್ನು ಸ್ವಂತ ಬಲದಿಂದ ಗೆದ್ದುಕೊಟ್ಟಿದ್ದಾರೆ. ಪಾಕ್ ಟೀಮ್‌ನಲ್ಲಿರುವ ಹೈದರ್ ಅಲಿ, ಶಾದಾಬ್ ಖಾನ್, ಹ್ಯಾರಿಸ್ ರೌಫ್, ಮೊಹಮ್ಮದ್ ಹಸ್ನೇನ್, ಮೊಹಮ್ಮದ್ ವಾಸಿಮ್, ನಸೀಮ್ ಶಾ, ಶಾಹೀನ್ ಶಾ ಆಫ್ರಿದಿ ಮತ್ತು ಶಾನ್ ಮಸೂದ್ ಕೂಡ ಅವಿವಾಹಿತರು. ಇವರ್ಯಾರಿಗೂ ಮದುವೆಯಾಗಿಲ್ಲ.
ಟಿ20 ವಿಶ್ವಕಪ್‌ನ ಆರಂಭದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ನಾಲ್ಕು ವಿಕೆಟ್‌ಗಳಿಂದ ಸೋತಿತ್ತು. ಇದಾದ ಬಳಿಕ ಜಿಂಬಾಬ್ವೆ ವಿರುದ್ಧವೂ 1 ರನ್‌ನಿಂದ ಹೀನಾಯ ಸೋಲನ್ನು ಎದುರಿಸಬೇಕಾಯಿತು. ಆದರೆ ಸೂಪರ್-12ನಲ್ಲಿ ನೆದರ್ಲ್ಯಾಂಡ್ಸ್, ದಕ್ಷಿಣ ಆಫ್ರಿಕಾವನ್ನು 13 ರನ್‌ಗಳಿಂದ ಪರಾಭವಗೊಳಿಸಿದ್ದರಿಂದ ಪಾಕಿಸ್ತಾನಕ್ಕೆ ಸೆಮಿಫೈನಲ್ ಪ್ರವೇಶಿಸಲು ಅವಕಾಶ ಸಿಕ್ಕಿದೆ. 2009ರಲ್ಲಿ ಪಾಕಿಸ್ತಾನ ಟಿ20 ವಿಶ್ವಕಪ್ ಗೆದ್ದಿತ್ತು. ನಂತರ ಟ್ರೋಫಿ ಗೆಲುವು ಸಫಲವಾಗಿಲ್ಲ. ಅದೃಷ್ಟದ ನೆರವಿನಿಂದ ಪಾಕಿಸ್ತಾನ ತಂಡ ಸೆಮಿಫೈನಲ್ ತಲುಪಿದ್ದರೂ, ಅವರ ಬೌಲಿಂಗ್ ದಾಳಿ ತುಂಬಾ ಪ್ರಬಲವಾಗಿದೆ. ಹಾಗಾಗಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ.