ಇಸ್ಲಾಮಾಬಾದ್: ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲೂ ವಸ್ತುಗಳ ಬೆಲೆ ಗಗನಕ್ಕೇರಿದೆ. ಸಕ್ಕರೆ, ತುಪ್ಪ, ಗೋಧಿ ಹಿಟ್ಟು ಮುಂತಾದವುಗಳ ಬೆಲೆ ಹೆಚ್ಚಳವಾಗಿದೆ.
ಪಾಕಿಸ್ತಾನ ಸರಕಾರದ ಕ್ಯಾಬಿನೆಟ್ ನ ಆರ್ಥಿಕ ಸಮನ್ವಯ ಸಮಿತಿಯು ಯುಟಿಲಿಟಿ ಸ್ಟೋರ್ಸ್ ಗೆ ಆಹಾರ ವಸ್ತುಗಳ ಬೆಲೆ ಹೆಚ್ಚಳ ಮಾಡಲು ಅನುಮೋದನೆ ನೀಡಿದ್ದರಿಂದ ಮಾರುಕಟ್ಟೆ ದರವು ಹೆಚ್ಚಳವಾಗಿದೆ.
ಬೆಲೆ ಪರಿಷ್ಕರಣೆ ನಂತರ ತುಪ್ಪದ ಬೆಲೆಯಲ್ಲಿ ಶೇ.53ರಷ್ಟು ಹೆಚ್ಚಾಗಿದೆ. ಒಂದು ಕಿಲೋಗೆ 170 ರೂ.ಗಳಿದ್ದ ತುಪ್ಪದ ಬೆಲೆ ಪ್ರಸ್ತುತ 260 ರೂ. ಆಗಿದೆ. 20 ಕೆ.ಜಿ ಗೋಧಿ ಹಿಟ್ಟಿಗೆ 800 ರೂ. ದರವಿತ್ತು. ಪ್ರಸ್ತುತ ಶೇ.19 ರಷ್ಟು ಹೆಚ್ಚಳವಾಗಿದ್ದು 950 ರೂ.ಗಳಾಗಿವೆ. ಇನ್ನು ಸಕ್ಕರೆ ದರವು ಈ ಮೊದಲು ಕೆ.ಜಿ.ಗೆ 68 ರೂ. ಇದ್ದರೆ ಈಗ 85 ರೂ.ಗಳಾಗಿವೆ.
BIG NEWS: ಅಮಿತ್ ಶಾ ಭೇಟಿ ಬಳಿಕ ಸಿಎಂ ಯಡಿಯೂರಪ್ಪ ಹೇಳಿದ್ದೇನು….?
ಇನ್ನು ಆಹಾರ ವಸ್ತುಗಳ ಬೆಲೆಯೇರಿಕೆ ಬೆನ್ನಲ್ಲೇ ಇಮ್ರಾನ್ ಖಾನ್ ಸರಕಾರವು ಇಂಧನ ದರವನ್ನೂ ಪರಿಷ್ಕರಿಸಿದೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿದ್ದು, ಪ್ರಸ್ತುತ ಪೆಟ್ರೋಲ್ ದರ ಲೀಟರ್ ಗೆ 118.09 ರೂ. ಇದ್ದರೆ, ಡೀಸೆಲ್ ದರ 116.5 ರೂ.ಗಳಾಗಿವೆ.
ಈ ಸಂಬಂಧ ಟ್ವೀಟ್ ಮಾಡಿರುವ ಪಾಕ್ ನ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಸಚಿವರು, ‘’ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚಳವಾಗಿರುವುದರಿಂದ, ಪಾಕಿಸ್ತಾನವೂ ಬೆಲೆ ಏರಿಕೆ ಮಾಡಬೇಕಾದದ್ದು ಅನಿವಾರ್ಯವಾಗಿದೆ. ಅದಾಗ್ಯೂ ಈ ಪಾಕಿಸ್ತಾನವು ಈ ಪ್ರಾಂತ್ಯದ ಅತ್ಯಂತ ಕನಿಷ್ಟ ಬೆಲೆ ಏರಿಕೆ ಮಾಡಿದೆ’’ ಎಂದು ತಿಳಿಸಿದ್ದಾರೆ.