ಕಿಸೆಯಲ್ಲಿ ಸದಾ ಪರ್ಸ್ ಇದ್ದಿರುತ್ತೆ. ಪರ್ಸ್ ತುಂಬಾ ಹಣ ಇರಲಿ ಅಂತಾ ಎಲ್ಲರೂ ಬಯಸ್ತಾರೆ. ಆದ್ರೆ ಎಷ್ಟು ಪ್ರಯತ್ನಪಟ್ಟರೂ ಪರ್ಸ್ ನಲ್ಲಿ ಹಣ ಮಾತ್ರ ನಿಲ್ಲೋದಿಲ್ಲ. ಇದಕ್ಕೆ ನಿಮ್ಮ ಪರ್ಸ್ ನಲ್ಲಿರುವ ಕೆಲ ವಸ್ತುಗಳೂ ಕಾರಣ ಎಂಬುದು ನಿಮಗೆ ಗೊತ್ತಾ?
ವಾಸ್ತು ಶಾಸ್ತ್ರದ ಪ್ರಕಾರ ದೇವಿ ಲಕ್ಷ್ಮಿ ಕೃಪೆಯಿದ್ದರೆ ಮಾತ್ರ ಪರ್ಸ್ ನಲ್ಲಿ ಸದಾ ಹಣವಿರಲು ಸಾಧ್ಯ. ಹಾಗಾಗಿ ಕಿಸೆಯಲ್ಲಿ ಪರ್ಸ್ ಇಟ್ಟುಕೊಳ್ಳುವ ಮುನ್ನ ಅದಕ್ಕೆ ಸಂಬಂಧಿಸಿದ ಕೆಲ ವಿಷ್ಯಗಳನ್ನು ಅವಶ್ಯವಾಗಿ ತಿಳಿದುಕೊಳ್ಳಿ.
ಎಂದೂ ಹರಿದ ಪರ್ಸನ್ನು ಕಿಸೆಯಲ್ಲಿಟ್ಟುಕೊಳ್ಳಬೇಡಿ. ಇದು ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ. ಹಾಗಾಗಿ ಪರ್ಸ್ ಹಾಳಾಗಿದ್ದರೆ ತಕ್ಷಣ ಬೇರೆ ಪರ್ಸ್ ಖರೀದಿ ಮಾಡಿ.
ಪರ್ಸ್ ಹಣವನ್ನಿಟ್ಟುಕೊಳ್ಳುವ ವಸ್ತು. ಇದ್ರಲ್ಲಿ ಹಳೆ ಕಾಗದ, ರಸೀದಿ, ಹಳೆ ಬಿಲ್ ಗಳನ್ನು ಇಟ್ಟುಕೊಳ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಹಳೆ ಕಾಗದಗಳನ್ನು ಇಟ್ಟುಕೊಳ್ಳುವುದ್ರಿಂದ ರಾಹುವಿನ ಪ್ರಭಾವ ಹೆಚ್ಚಾಗುತ್ತದೆ. ಹಾಗಾಗಿ ಈ ವಸ್ತುಗಳನ್ನು ಪರ್ಸ್ ನಲ್ಲಿಡಬೇಡಿ.
ಚಾಕೋಲೇಟ್, ಪಾನ್ ಮಸಾಲಾ ಸೇರಿದಂತೆ ತಿನ್ನುವ ಪದಾರ್ಥವನ್ನು ಪರ್ಸ್ ನಲ್ಲಿಟ್ಟುಕೊಳ್ಳಬಾರದು. ಇದು ಸದಾ ಧನದ ಅಭಾವಕ್ಕೆ ಕಾರಣವಾಗುತ್ತದೆ.
ಪರ್ಸ್ ನಲ್ಲಿ ಮರೆತೂ ಮಾತ್ರೆ, ಕ್ಯಾಪ್ಸೂಲ್ ಇಟ್ಟುಕೊಳ್ಳಬಾರದು. ಇದು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ.
ಪರ್ಸ್ ನಲ್ಲಿ ಚಾಕು, ಬ್ಲೇಡ್ ನಂತಹ ವಸ್ತುಗಳನ್ನು ಕೂಡ ಇಡಬಾರದು. ತಾಮ್ರ, ಬೆಳ್ಳಿಯ ನಾಣ್ಯವನ್ನು ಪರ್ಸ್ ನಲ್ಲಿಟ್ಟುಕೊಳ್ಳುವುದು ಒಳ್ಳೆಯದು.