ಹಣ ಗಳಿಸುವ ಆಸೆಯನ್ನು ಎಲ್ಲರೂ ಹೊಂದಿರುತ್ತಾರೆ. ಆದ್ರೆ ಎಷ್ಟೇ ಕಷ್ಟಪಟ್ಟರೂ ಕೈನಲ್ಲಿ ಹಣ ನಿಲ್ಲುವುದಿಲ್ಲ. ಅಂತವರು ತಮ್ಮ ಪರ್ಸ್ ನಲ್ಲಿ ಕೆಲವೊಂದು ವಸ್ತುಗಳನ್ನು ಇಟ್ಟುಕೊಳ್ಳುವ ಮೂಲಕ ಆರ್ಥಿಕ ವೃದ್ಧಿ ಕಾಣಬಹುದು.
ಪರ್ಸ್ ನಲ್ಲಿ ಧನದ ದೇವಿ ಲಕ್ಷ್ಮಿಯ ಭಾವಚಿತ್ರವನ್ನು ಇಟ್ಟುಕೊಳ್ಳಬೇಕು. ದೇವಿ ಕೃಪೆಯಿಂದ ಪರ್ಸ್ ನಲ್ಲಿ ಸದಾ ಹಣ ಇರುವುದಲ್ಲದೇ ಆರ್ಥಿಕ ಅಭಿವೃದ್ಧಿಯಾಗುತ್ತದೆ.
ಮನೆಯಲ್ಲಿ ಕಮಲದ ಹೂವಿನ ಬೀಜವನ್ನು ಇಟ್ಟುಕೊಳ್ಳಿ. ಇದು ಧನಲಕ್ಷ್ಮಿ ಕೃಪೆಗೆ ದಾರಿ ಮಾಡಿಕೊಡುತ್ತದೆ.
ಪರ್ಸ್ ನಲ್ಲಿ ಅಕ್ಷತೆಯನ್ನು ಇಟ್ಟುಕೊಳ್ಳಬೇಕು. ಪರ್ಸ್ ನಲ್ಲಿ ಅಕ್ಕಿಯಿಟ್ಟುಕೊಳ್ಳವುದ್ರಿಂದ ಲಕ್ಷ್ಮಿ ಕೃಪೆ ಸದಾ ಇರುತ್ತದೆ.
ಪರ್ಸ್ ನಲ್ಲಿ ಶ್ರೀ ಯಂತ್ರ ಇಟ್ಟುಕೊಳ್ಳುವುದ್ರಿಂದ ಧನಕ್ಕೆ ಸಂಬಂಧಿಸಿದ ಎಲ್ಲ ಸಮಸ್ಯೆ ದೂರವಾಗುತ್ತದೆ.
ಪರ್ಸ್ ನಲ್ಲಿ ಸಣ್ಣ ಕನ್ನಡಿ ಇಟ್ಟುಕೊಳ್ಳುವುದ್ರಿಂದ ಹಣ ವ್ಯಯವಾಗುವುದಿಲ್ಲ. ನೌಕರಿಯಲ್ಲಿ ಕೂಡ ಏಳ್ಗೆಯಾಗುತ್ತದೆ.