ಪರೀಕ್ಷೆ ಹತ್ತಿರ ಬರ್ತಿದ್ದಂತೆ ಮಕ್ಕಳ ಜೊತೆ ಪೋಷಕರು ಕೂಡ ಒತ್ತಡಕ್ಕೊಳಗಾಗ್ತಾರೆ. ಪರೀಕ್ಷೆ ಹತ್ತಿರ ಬರ್ತಿದ್ದಂತೆ ಓದು ಓದು ಎಂದು ಮಕ್ಕಳ ಹಿಂದೆ ಬೀಳುವ ಪೋಷಕರು ಮಕ್ಕಳ ಒತ್ತಡ ಹೆಚ್ಚು ಮಾಡ್ತಾರೆ. ಇದ್ರ ಬದಲು ಮಕ್ಕಳಿಗೆ ಒಳ್ಳೆ ಆಹಾರ ನೀಡಿ, ಧೈರ್ಯ ತುಂಬುವ ಅವಶ್ಯಕತೆಯಿರುತ್ತದೆ. ಪರೀಕ್ಷೆ ವೇಳೆ ಮಕ್ಕಳಿಗೆ ಒತ್ತಡ ಕಡಿಮೆ ಮಾಡುವ ಆಹಾರವನ್ನು ನೀಡಬೇಕಾಗುತ್ತದೆ.
ಪರೀಕ್ಷೆ ಸಮಯದಲ್ಲೊಂದೇ ಅಲ್ಲ ವಿದ್ಯಾಭ್ಯಾಸದ ವೇಳೆ ಮಕ್ಕಳಿಗೆ ಈ ಪಾನೀಯವನ್ನು ನೀಡಬಹುದು. ಇದು ಮಕ್ಕಳ ಸೋಮಾರಿತನವನ್ನು ಕಡಿಮೆ ಮಾಡಿ ಶಕ್ತಿ, ಉತ್ಸಾಹ ನೀಡುತ್ತದೆ. ಏಕಾಗ್ರತೆ ಶಕ್ತಿಯನ್ನು ಈ ಪಾನೀಯಗಳು ಹೆಚ್ಚಿಸುತ್ತವೆ.
ಬ್ಲ್ಯೂಬೆರಿ, ಸ್ಟ್ರಾಬೆರಿ ಹಣ್ಣಿನ ಜ್ಯೂಸ್ : ಈ ಹಣ್ಣುಗಳು ಆಂಟಿಆಕ್ಸಿಡೆಂಟ್ ಗಳಿಂದ ತುಂಬಿರುತ್ತವೆ. ಮೆದುಳಿನ ಕೋಶಗಳು ಹಾನಿಗೊಳಗಾಗುವುದನ್ನು ಇದು ತಪ್ಪಿಸುತ್ತದೆ. ಇದ್ರಲ್ಲಿರುವ ವಿಟಮಿನ್ ಸಿ ಮೆದುಳಿಗೆ ಒಳ್ಳೆಯದು.
ಓದುವ ಮಕ್ಕಳಿಗೆ ಕಾಫಿ ಬದಲು ಬೆಲ್ಲದ ಚಹಾ ನೀಡಿ. ಬೆಲ್ಲದ ಟೀ ಸೇವನೆ ಮಾಡುವುದ್ರಿಂದ ನಿದ್ರೆ ಕಣ್ಮರೆಯಾಗುತ್ತದೆ. ಒತ್ತಡ ಕಡಿಮೆಯಾಗುತ್ತದೆ. ಇದು ಆಯಾಸವನ್ನು ಕಡಿಮೆ ಮಾಡುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ಇದು ಬಲಗೊಳಿಸುತ್ತದೆ.
ನೆನಪಿನ ಶಕ್ತಿ ಹೆಚ್ಚಿಸಲು ಬಾದಾಮಿ ಹಾಲು ಉತ್ತಮ. ಇದ್ರಲ್ಲಿರುವ ಪ್ರೋಟೀನ್ ನೆನಪಿನ ಶಕ್ತಿಯನ್ನು ಬಲಗೊಳಿಸುತ್ತದೆ.
ಡಾರ್ಕ್ ಚಾಕೋಲೇಟ್ ಶೇಕ್ : ಡಾರ್ಕ್ ಚಾಕೋಲೇಟ್ ಹೃದಯದಿಂದ ಹಿಡಿದು ಮೆದುಳಿನವರೆಗೆ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಇದ್ರಿಂದ ನೆನಪಿನ ಶಕ್ತಿ ಹೆಚ್ಚಾಗುತ್ತದೆ. ನಿದ್ರೆಯನ್ನ ಕಡಿಮೆ ಮಾಡುತ್ತದೆ.