ಈ ಬಾರಿಯ 10ನೇ ತರಗತಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ. ಈ ಮೊದಲು ಫಲಿತಾಂಶ ಮೇ 12ರಂದು ಪ್ರಕಟವಾಗಲಿದೆ ಎಂದು ಹೇಳಲಾಗಿತ್ತು.
ಇದಕ್ಕೆ ಪೂರಕವೆಂಬಂತೆ ಮೌಲ್ಯಮಾಪನ ಕಾರ್ಯವೂ ಸಹ ಪ್ರಗತಿಯಲ್ಲಿತ್ತು. ಆದರೆ ಇದರ ಮಧ್ಯೆ ಸರ್ಕಾರಿ ರಜೆಗಳು ಬಂದ ಕಾರಣ ಮೌಲ್ಯಮಾಪನ ಕೊಂಚ ವಿಳಂಬವಾಗಿದೆ.
ಹೀಗಾಗಿ ಹತ್ತನೇ ತರಗತಿ ಫಲಿತಾಂಶ ಮೇ 15ರೊಳಗೆ ಪ್ರಕಟಗೊಳ್ಳಲಿದೆ ಎಂದು ಹೇಳಲಾಗಿದೆ. ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸಹ ಈ ವಿಷಯ ತಿಳಿಸಿದ್ದಾರೆ.