ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಬಗೆಯ ವಿಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ. ಕೆಲವೊಂದು ತಮಾಷೆಯಾಗಿದ್ದರೆ, ಇನ್ನು ಕೆಲವು ನಮ್ಮ ಜ್ಞಾನವನ್ನು ಹೆಚ್ಚಿಸುವಂತಿವೆ. ಮತ್ತೆ ಹಲವು ವಿಡಿಯೋಗಳಿಗೆ ಯಾವುದೇ ಅರ್ಥವೇ ಇರೋದಿಲ್ಲ.
ಇದೀಗ ಇಂತಹದ್ದೇ ಸಾಲಿಗೆ ಸೇರಿದ ವಿಡಿಯೋವೊಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಲಾಗಿರುವ ವಿಡಿಯೋದಲ್ಲಿ ಬಾಲಕನೊಬ್ಬ 60 ಅಂಕಗಳ ಪ್ರಶ್ನೆಗೆ 1 ಅಂಕವನ್ನು ಮಾತ್ರ ಪಡೆದಿದ್ದ.
ಆದರೆ ಇದರಲ್ಲಿ ತಮಾಷೆಯ ವಿಚಾರ ಅಂದರೆ ಆ ಬಾಲಕ ಕೇವಲ 1 ಅಂಕ ಗಳಿಸಿದ್ದರೂ ಸಹ ಬಹಳ ಖುಷಿಯಾಗಿದ್ದ. ಈತನ ಖುಷಿಯನ್ನು ಕಂಡ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.
ಈ ವಿಡಿಯೋ ನೋಡಿದ ನೆಟ್ಟಿಗರು ಈ ಬಾಲಕನಿಗೆ ಇಷ್ಟೊಂದು ಆತ್ಮವಿಶ್ವಾಸ ಬರಲು ಹೇಗೆ ಸಾಧ್ಯ..? ಕೇವಲ 1 ಅಂಕ ಗಳಿಸಿದ್ದರೂ ಸಹ ಬಾಲಕನ ಆತ್ಮ ವಿಶ್ವಾಸ ನಿಜಕ್ಕೂ ಹುಬ್ಬೇರಿಸುವಂತಿದೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
https://www.instagram.com/reel/CcNvBKmD3hc/?utm_source=ig_web_copy_link