
ಪರೀಕ್ಷೆ ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧಾರ ಮಾಡುವಂತಹದ್ದು, ಪರೀಕ್ಷೆ ಚೆನ್ನಾಗಿ ಬರೆದು ಉತ್ತಮ ಅಂಕ ಗಳಿಸಿ ಮುಂದಿನ ತರಗತಿಗೆ ತೇರ್ಗಡೆ ಹೊಂದಿದ್ದಾಗ ಮಾತ್ರ ಶಿಕ್ಷಣ ಮುಗಿಸಿ ಉದ್ಯೋಗಕ್ಕೆ ಸೇರಬಹುದು. ಹಾಗಾಗಿ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರಲು ವಾಸ್ತು ಪ್ರಕಾರ ಈ ನಿಯಮವನ್ನು ಪಾಲಿಸಿ.
*ಅಕೌಂಟ್ ಹಾಗೂ ಗಣಿತ (Accounts and Mathematics)ದಲ್ಲಿ ಉತ್ತಮ ಫಲಿತಾಂಶ ಸಿಗಲು ವಿದ್ಯಾರ್ಥಿಗಳು ಉತ್ತರದ ಕಡೆಗೆ ಕುಳಿತುಕೊಂಡು ಓದುವುದು, ಬರೆಯುವುದನ್ನು ಮಾಡಿ.
*ಭೌತಶಾಸ್ತ್ರ ಮತ್ತು ಆರ್ಕಿಟೆಕ್ಟರ್ (Physics and Architecture) ವಿಷಯದಲ್ಲಿ ಉತ್ತಮ ಫಲಿತಾಂಶ ಸಿಗಲು ವಿದ್ಯಾರ್ಥಿಗಳು ದಕ್ಷಿಣದ ಕಡೆಗೆ ಕುಳಿತುಕೊಳ್ಳಿ.
*ಹಿಂದಿ, ಸಂಸ್ಕೃತ (hindi, samskrath)ವಿಷಯದಲ್ಲಿ ಉತ್ತಮ ಫಲಿತಾಂಶ ಸಿಗಲು ವಿದ್ಯಾರ್ಥಿಗಳು ಈಶಾನ್ಯ ಕಡೆಗೆ ಕುಳಿತುಕೊಳ್ಳಿ.
*ಬಿಸಿನೆಸ್, ಕಾನೂನು, ಅರ್ಥಶಾಸ್ತ್ರ, ಇಂಗ್ಲಿಷ್, ಇತಿಹಾಸ (Business, Law, Economics, English, History)ವಿಷಯದಲ್ಲಿ ಉತ್ತಮ ಫಲಿತಾಂಶ ಸಿಗಲು ವಿದ್ಯಾರ್ಥಿಗಳು ಪಶ್ಚಿಮದ ಕಡೆಗೆ ಕುಳಿತುಕೊಳ್ಳಿ.
*ಸೈಕಾಲಜಿ (psychology)ವಿಷಯದಲ್ಲಿ ಉತ್ತಮ ಫಲಿತಾಂಶ ಸಿಗಲು ವಿದ್ಯಾರ್ಥಿಗಳು ನೈರುತ್ಯದ ಕಡೆಗೆ ಕುಳಿತುಕೊಳ್ಳಿ
*ಹೋಮ್ ಸೈನ್ಸ್, ಭೌಗೋಳಿಕ (Home Science, Geography)ವಿಷಯದಲ್ಲಿ ಉತ್ತಮ ಫಲಿತಾಂಶ ಸಿಗಲು ವಿದ್ಯಾರ್ಥಿಗಳು ವಾಯುವ್ಯದ ಕಡೆಗೆ ಕುಳಿತುಕೊಳ್ಳಿ.