ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಶ್ರಮ ಅವಶ್ಯಕ. ನಿಮ್ಮ ಓದಿನ ಬಗ್ಗೆ ಗಮನ ನೀಡಿದಂತೆಯೇ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ.
BIG NEWS: ಸಕ್ರಿಯ ರಾಜಕಾರಣಕ್ಕೆ ಜನಾರ್ಧನ ರೆಡ್ಡಿ; ಸಿಎಂ ಬೊಮ್ಮಾಯಿ ಹೇಳಿದ್ದೇನು ಗೊತ್ತಾ…?
ಉಪವಾಸವಿದ್ದು, ನಿದ್ದೆಗೆಟ್ಟು ಓದಬೇಡಿ. ಸಮಯ ವ್ಯರ್ಥ ಮಾಡದೇ, ಸಿಕ್ಕ ವೇಳೆಯಲ್ಲಿಯೇ ನಿಮ್ಮ ಓದು ಮುಂದುವರೆಯಲಿ. ಕೆಲವರಂತೂ ಪರೀಕ್ಷೆ ಸಮೀಪಿಸುತ್ತಿರುವಂತೆಯೇ ಒತ್ತಡಕ್ಕೆ ಒಳಗಾಗಿ ನಿದ್ದೆಗೆಟ್ಟು ಓದುತ್ತಾರೆ. ಇನ್ನು ಕೆಲವರು ಸಮಯಕ್ಕೆ ಸರಿಯಾಗಿ ಊಟ, ತಿಂಡಿಯನ್ನೂ ಸೇವಿಸುವುದಿಲ್ಲ.
ಹೀಗೆಲ್ಲಾ ಮಾಡಬೇಡಿ, ಇದರಿಂದ ಆರೋಗ್ಯ ಏರುಪೇರಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಉಪವಾಸ ಮಾಡದೇ, ಅತಿಯಾಗಿ ಆಹಾರ ಸೇವಿಸದೇ, ಹಿತಮಿತವಾಗಿ ಆಹಾರ ಸೇವಿಸಿರಿ.
ಅರಬ್ಬೀ ಸಮುದ್ರದಲ್ಲಿ ಮುಳುಗಿ ಯುವತಿಯರಿಬ್ಬರ ಸಾವು
ಸಮತೋಲನ ಆಹಾರದಿಂದ ಆರೋಗ್ಯದ ಜೊತೆಗೆ, ಓದಿರುವುದನ್ನು ಹೆಚ್ಚು ಕಾಲ ನೆನಪಿನಲ್ಲಿ ಇಟ್ಟುಕೊಳ್ಳುವುದು ಸಾಧ್ಯವಿದೆ ಎನ್ನುತ್ತಾರೆ ತಜ್ಞರು.
ಕಂಡದ್ದನ್ನೆಲ್ಲಾ ತಿಂದು ಆರೋಗ್ಯ ಹಾಳು ಮಾಡಿಕೊಳ್ಳದೇ, ಆರೋಗ್ಯಕ್ಕೆ ಪೂರಕವಾದ ಸಮತೋಲನ ಆಹಾರವನ್ನು ಸೇವಿಸಿ, ಓದಿನ ಬಗ್ಗೆ ಗಮನ ಹರಿಸಿ, ಯಶಸ್ಸು ನಿಮ್ಮದಾಗುತ್ತದೆ.