ಪಾರ್ಟಿಯೊಂದರಲ್ಲಿ ಭಾಗವಹಿಸಿ ಕೊರೊನಾ ಸೋಂಕಿಗೆ ಒಳಗಾಗಿದ್ದ ಬಾಲಿವುಡ್ ಬೆಡಗಿ ಕರೀನಾ ಕಪೂರ್ ಈಗ ನಿಟ್ಟುಸಿರು ಬಿಡುವಂತಾಗಿದೆ.
ಕಾರಣ, ಅವರ ಜೀನೋಮ್ ಸೀಕ್ವೆನ್ಸಿಂಗ್ ಟೆಸ್ಟ್ ರಿಪೋರ್ಟ್ ನೆಗೆಟಿವ್ ಎಂದು ಬಂದಿದೆ. ಸದ್ಯ ಕರೀನಾ ಕ್ವಾರಂಟೈನ್ ನಲ್ಲಿದ್ದಾರೆ. ಓಮಿಕ್ರಾನ್ ಆತಂಕ ಅವರನ್ನು ಕಾಡುತ್ತಿತ್ತು. ವರದಿ ನೆಗೆಟಿವ್ ಬಂದಿದ್ದಕ್ಕೆ ಸಂತಸ ಪಡುವಂತಾಗಿದೆ.
ನಟಿ ಕರೀನಾ ತಮ್ಮ ಸ್ನೇಹಿತೆ ಆಯೋಜಿಸಿದ್ದ ಪಾರ್ಟಿಯಲ್ಲಿ ಈ ತಿಂಗಳ ಆರಂಭದಲ್ಲಿ ಭಾಗವಹಿಸಿದ್ದರು. ಆ ನಂತರ ಅವರಲ್ಲಿ ಕೊರೊನಾ ಇರುವುದು ಖಚಿತವಾಗಿತ್ತು. ಇವರೊಂದಿಗೆ ಪಾರ್ಟಿಯಲ್ಲಿ ಭಾಗವಹಿಸಿದ್ದ ಕೆಲವರಲ್ಲಿಯೂ ಸೋಂಕು ಕಾಣಿಸಿಕೊಂಡಿತ್ತು.
ಕ್ವಾರಂಟೈನ್ ನಲ್ಲಿದ್ದ ನಟಿ, ಇನ್ನೇನು ಕೆಲವೇ ದಿನಗಳಲ್ಲಿ ನನ್ನ ಕ್ವಾರಂಟೈನ್ ಮುಗಿಯಲಿದೆ ಎಂದು ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದ ಮೂಲಕ ಹೇಳಿದ್ದರು. ಇದರ ಬೆನ್ನಲ್ಲಿಯೇ ಓಮಿಕ್ರಾನ್ ವರದಿ ನೆಗೆಟಿವ್ ಬಂದಿದ್ದು, ಅವರನ್ನು ಮತ್ತಷ್ಟ ನಿರಾಳರನ್ನಾಗಿ ಮಾಡಿದೆ.