ಹತ್ತನೇ ತರಗತಿ ಮುಖ್ಯ ಪರೀಕ್ಷೆಯ ಪಠ್ಯ ಕಡಿತವಾದಮೇಲೆ, ಸಹಜವಾಗಿ ನಮ್ಮ ಪರೀಕ್ಷೆಯ ಪಠ್ಯದಲ್ಲು ರಿಡಕ್ಷನ್ ಆಗಬೇಕೆಂದು ಪಿಯು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ. ಪೋಷಕರು ಮಕ್ಕಳ ಮನವಿಗೆ ಸಾಥ್ ನೀಡಿದ್ದು ಪರೀಕ್ಷೆ ಪಠ್ಯ ಕಡಿತಗೊಳಿಸಿ ಎಂದು ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.
ಹೌದು, ಕೊರೋನಾ ಸಾಂಕ್ರಾಮಿಕದಿಂದ ಅತ್ಯಂತ ಸೂಕ್ಷ್ಮ ಸ್ಥಿತಿ ತಲುಪಿರುವುದು ಶೈಕ್ಷಣಿಕ ಕ್ಷೇತ್ರ. ಮಕ್ಕಳ ಮೌಲ್ಯಯುತ ಶಿಕ್ಷಣಕ್ಕಾಗಿ ಸಾಕಷ್ಟು ಕ್ರಮಗಳನ್ನ ತೆಗೆದ್ಕೊಂಡು ಕೊರೋನಾ ನಡುವೆಯು ಆನ್ಲೈನ್, ಆಫ್ಲೈನ್ ತರಗತಿಗಳನ್ನ ನಡೆಸಿದ್ರು ಸಂಪೂರ್ಣ ಸಿಲಬಸ್ ಅನ್ನು ಮಕ್ಕಳ ತಲೆಗೆ ತುಂಬುವುದು ಕಷ್ಟವಾಗಿದೆ. ಎರಡನೇ ಅಲೆಯಿಂದ ಕಾಲೇಜುಗಳು ತಡವಾಗಿ ಆರಂಭವಾಗಿವೆ, ಮೂರನೇ ಅಲೆ ಸಮಸ್ಯೆಯಿಂದಲೂ ಮಕ್ಕಳ ಶೈಕ್ಷಣಿಕ ಕಲಿಕೆ ಸರಿಯಾಗಿ ಆಗಿಲ್ಲ. ಎಂದಿರುವ ವಿದ್ಯಾರ್ಥಿಗಳು ಹಾಗೂ ಪೋಷಕರು ಎಸ್ಎಸ್ಎಲ್ಸಿ ಪರೀಕ್ಷೆಯಂತೆ ಈ ವರ್ಷದ ಪಿಯು ಮುಖ್ಯ ಪರೀಕ್ಷೆಯಲ್ಲಿ ಭಾಷಾ ವಿಷಯ ಮಾತ್ರವಲ್ಲ, ಐಚ್ಛಿಕ ಸಬ್ಜೆಕ್ಟ್ ಗಳಲ್ಲು 20% ಪಠ್ಯ ಕಡಿತ ಮಾಡಿ ಎಂದು ಮನವಿ ಮಾಡಿದ್ದಾರೆ.
ಇತ್ತ ವಿದ್ಯಾರ್ಥಿಗಳ ಮನವಿ ಮೇಲೆ ಶಿಕ್ಷಣ ಇಲಾಖೆ ಇಂದು ಪರಿಶೀಲನಾ ಸಭೆ ನಡೆಸುತ್ತಿದೆ. ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹಾಗೂ ಪಿಯು ಬೋರ್ಡ್ ಅಧಿಕಾರಿಗಳು ಪಠ್ಯ ಕಡಿತದ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ಸಭೆಯಲ್ಲಿ ವಿದ್ಯಾರ್ಥಿಗಳ ಮನವಿಯನ್ನ ಪರಿಗಣಿಸಿ ಪಠ್ಯ ಕಡಿತ ಮಾಡಬೇಕಾ ಅಥವಾ ಪರ್ಯಾಯವಾಗಿ ಏನು ಅನಕೂಲ ಮಾಡಬೇಕು ಎಂದು ಚರ್ಚಿಸಲಾಗುತ್ತಿದೆ.