ಬೇಸಿಗೆ ಬಂತೆಂದ್ರೆ ಐಸ್ ಕ್ಯೂಬ್ ನೆನಪಿಗೆ ಬರುತ್ತದೆ. ಬಿಸಿಲ ಬೇಗೆಗೆ ದಣಿದಿರುವವರು ಕೂಲ್ ಆಗಲು ಐಸ್ ಕ್ಯೂಬ್ ಮೊರೆ ಹೋಗ್ತಾರೆ. ತಿನ್ನುವ, ಕುಡಿಯುವುದಕ್ಕೆ ಮಾತ್ರ ಐಸ್ ಕ್ಯೂಬ್ ಸೀಮಿತವಾಗಿಲ್ಲ. ಇದು ಸೌಂದರ್ಯವರ್ಧಕವಾಗಿ ಕೆಲಸ ಮಾಡುತ್ತೆ ಎಂಬುದು ನಿಮಗೆ ಗೊತ್ತಾ?
ಸಾಮಾನ್ಯವಾಗಿ ಬ್ಯೂಟಿ ಪಾರ್ಲರ್ ಗಳಲ್ಲಿರುವ ಫೇಶಿಯಲ್, ದುಬಾರಿ ವಸ್ತುಗಳಿಗಿಂತ ಐಸ್ ಹೆಚ್ಚು ಪರಿಣಾಮಕಾರಿ. ಇದು ನೈಸರ್ಗಿಕವಾಗಿ ಸೌಂದರ್ಯವನ್ನು ಹೆಚ್ಚಿಸುತ್ತದೆ.
ಮುಖಕ್ಕೆ ಐಸ್ ಕ್ಯೂಬ್ ಇಟ್ಟು ಮಸಾಜ್ ಮಾಡುವುದ್ರಿಂದ ಮುಖದ ಚರ್ಮದಲ್ಲಿರುವ ಕೊಳಕು ಹೊರಗೆ ಬರುತ್ತದೆ. ಆದ್ರೆ ಎಂದೂ ಐಸ್ ಕ್ಯೂಬನ್ನು ನೇರವಾಗಿ ಮುಖದ ಮೇಲೆ ಇಡಬಾರದು. ಸ್ವಚ್ಛ ಕಾಟನ್ ಬಟ್ಟೆಯಲ್ಲಿ ಐಸ್ ಕ್ಯೂಬ್ ಇಟ್ಟು ಅದನ್ನು ಮುಖದ ಮೇಲೆ ನಿಧಾನವಾಗಿ ಉಜ್ಜಬೇಕು.
ಮೊದಲು ಮುಖವನ್ನು ತೊಳೆದು ಸ್ವಚ್ಛ ಬಟ್ಟೆಯಲ್ಲಿ ಮುಖವನ್ನು ಕ್ಲೀನ್ ಮಾಡಿಕೊಳ್ಳಿ. ನಂತ್ರ ಕಾಟನ್ ಬಟ್ಟೆಯಲ್ಲಿ ಐಸ್ ಕ್ಯೂಬ್ ಇಟ್ಟು ಮಸಾಜ್ ಮಾಡಿ. ಇದು ಚರ್ಮದ ರಂಧ್ರಗಳನ್ನು ಮುಚ್ಚಿ ಚರ್ಮದ ಬಣ್ಣ ಬದಲಾಗಲು ಕಾರಣವಾಗುತ್ತದೆ. ಬೇಸಿಗೆಯಲ್ಲಿ ಕಾಡುವ ಕಪ್ಪು ಕಲೆ ಕಡಿಮೆಯಾಗುತ್ತದೆ.
ಚರ್ಮದ ಉರಿಯೂತವನ್ನು ಐಸ್ ಕ್ಯೂಬ್ ಕಡಿಮೆ ಮಾಡುತ್ತದೆ. ಕಣ್ಣಿನ ಉರಿ ಕಡಿಮೆ ಮಾಡಲು ಕೂಡ ಐಸ್ ಕ್ಯೂಬ್ ಬಳಸಲಾಗುತ್ತದೆ. ಆದ್ರೆ ಕಣ್ಣಿನ ಮೇಲೆ ಕೆಲ ಸೆಕೆಂಡುಗಳ ಕಾಲ ಮಾತ್ರ ಬಟ್ಟೆಯಲ್ಲಿ ಸುತ್ತಿದ ಐಸ್ ಕ್ಯೂಬ್ ಇಡಬೇಕು. ತುಂಬಾ ಹೊತ್ತು ಕಣ್ಣಿನ ಮೇಲಿದ್ದರೆ ಅಪಾಯ.
ಮುಖದ ಸುಕ್ಕು ತಡೆಯಲು ಐಸ್ ಕ್ಯೂಬ್ ಸಹಾಯಕಾರಿ. ಐಸ್ ಕ್ಯೂಬ್ ಗೆ ಜಾಸ್ಮಿನ್ ಎಣ್ಣೆಯ ಹನಿ ಹಾಕಿ ಬಟ್ಟೆಯಲ್ಲಿ ಸುತ್ತಿ ಮುಖಕ್ಕೆ ಮಸಾಜ್ ಮಾಡಬೇಕು. ಕಿತ್ತಳೆ ಅಥವಾ ನಿಂಬೆ ರಸವನ್ನು ಹಾಕಿ ಮಸಾಜ್ ಮಾಡಿದ್ರೂ ಸುಕ್ಕು ಕಡಿಮೆಯಾಗುತ್ತದೆ.
ಕೆಲವೊಮ್ಮೆ ಥ್ರೆಡ್ಡಿಂಗ್ ನಂತ್ರ ಉರಿ, ಊತ ಕಾಣಿಸಿಕೊಳ್ಳುತ್ತದೆ. ಐಸ್ ಕ್ಯೂಬ್ ನಿಂದ ಮಸಾಜ್ ಮಾಡಿದ್ರೆ ಉರಿ-ಊತ ಕಡಿಮೆಯಾಗುತ್ತದೆ.