ಈ ಇಂಟರ್ನೆಟ್ ವಿಶಿಷ್ಟ, ವಿಭಿನ್ನ ವಿಡಿಯೋಗಳ ಖಜಾನೆಯಾಗಿದೆ. ಇದೀಗ ಮದುವೆ ಮಂಟಪದಲ್ಲಿ ನಿಂತು ಇನ್ನೇನು ಪರಸ್ಪರ ಹೂಮಾಲೆ ಬದಲಾಯಿಸಬೇಕಾದ ವಧು-ವರರು ಸ್ಟೋನ್, ಸೀಜರ್, ಪೇಪರ್ ಆಟವಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ವಧು ಮತ್ತು ವರ ಪರಸ್ಪರ ಮಾಲೆಗಳನ್ನು ವಿನಿಮಯ ಮಾಡಿಕೊಳ್ಳಲು ಸಿದ್ಧರಾಗಿ ನಿಂತಿರುವುದನ್ನು ಕಾಣಬಹುದು. ಈ ವೇಳೆ ಅವರು ಮಕ್ಕಳಾಟವನ್ನು ಆಡಲು ಮುಂದಾಗಿದ್ದಾರೆ. ಯಾರು ಮೊದಲು ಹಾರ ಹಾಕುತ್ತಾರೆ ಎಂಬ ತೀರ್ಮಾನಕ್ಕೆ ಬರಬೇಕಿತ್ತು. ಹೀಗಾಗಿ ಇವರು ಈ ಆಟವನ್ನು ಆಡಿದ್ದಾರೆ.
ವಧು ಮತ್ತು ವರನನ್ನು ಪ್ರಿಯಾಂಕಾ ಶಾ ಮತ್ತು ರಾಹಿಲ್ ಶಾ ಎಂದು ಗುರುತಿಸಲಾಗಿದೆ. ಕ್ಲಿಪ್ ಅನ್ನು ವೆಡ್ಡಿಂಗ್ ವೈರ್‌ನ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಹಂಚಿಕೊಳ್ಳಲಾಗಿದೆ. ಇದು 1 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಹೂಮಾಲೆಯನ್ನು ಮೊದಲು ಯಾರು ಹಾಕಬೇಕೆಂದು ನಿರ್ಧರಿಸಲು, ಅವರು ಸ್ಟೋನ್, ಸೀಜರ್, ಪೇಪರ್ ಆಟವನ್ನು ಆಡಿದರು. ಈ ಆಟದಲ್ಲಿ ವಧು ಗೆದ್ದಿದ್ರಿಂದ ಆಕೆಯ ಮೊದಲಿಗೆ ವರನ ಕೊರಳಿಗೆ ಹೂಮಾಲೆ ಹಾಕಿದ್ದಾಳೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಕಾಮೆಂಟ್‌ಗಳ ವಿಭಾಗವು ಹೃದಯ ಮತ್ತು ಪ್ರೀತಿಯ ಎಮೋಜಿಗಳಿಂದ ತುಂಬಿದೆ.