ಪರವಾನಿಗೆ ಇಲ್ಲದೆ ರಾಜಸ್ಥಾನದಿಂದ 7 ಒಂಟೆಗಳನ್ನು ತಂದಿದ್ದ ಶಿವಮೊಗ್ಗ ನಿವಾಸಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಶಿವಮೊಗ್ಗ ಜಿಲ್ಲಾ ಪಶು ವೈದ್ಯಧಿಕಾರಿ ನೀಡಿದ ದೂರಿನ ಮೇರೆಗೆ ಈ ಕ್ರಮ ಜರುಗಿಸಲಾಗಿದೆ.
ರಾಜಸ್ಥಾನ ಮೂಲದ ಗೋವಿಂದ ಬೋರರ್ಸೆ ಎಂಬವರು ಶಿವಮೊಗ್ಗದಲ್ಲಿ ವಾಸಿಸುತ್ತಿದ್ದು, ರಾಜಸ್ಥಾನದಿಂದ 7 ಒಂಟೆಗಳನ್ನು ತಂದು ತುಂಗಾ ನಗರದ ಕನ್ವೆನ್ಷನ್ ಹಾಲ್ ಸಮೀಪದ ಸಾಮಿಲ್ ಬಳಿ ಇವನ್ನು ಕಟ್ಟಿ ಹಾಕಿದ್ದರು.
ಆದರೆ ರಾಜಸ್ಥಾನ ಒಂಟಿ ಸಾಗಾಣಿಕೆ ಮತ್ತು ಹತ್ಯೆ ನಿಷೇಧ ಕಾಯ್ದೆ 2016ರ ಅಡಿಯಲ್ಲಿ ಅನ್ಯ ರಾಜ್ಯದಿಂದ ಕರ್ನಾಟಕಕ್ಕೆ ಒಂಟೆ ತರುವ ವೇಳೆ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪತ್ರ ಹೊಂದಿರಬೇಕಾಗುತ್ತದೆ.
ಹೀಗಾಗಿ ಸಾಗಾಣಿಕೆ ಅನುಮತಿ ಪತ್ರ ಪಡೆಯದೆ ಗೋವಿಂದ ಅವರು ಒಂಟೆಗಳನ್ನು ರಾಜಸ್ಥಾನದಿಂದ ಶಿವಮೊಗ್ಗಕ್ಕೆ ತಂದಿರುವ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.