ಪಪ್ಪಾಯ ಪ್ರತಿಯೊಬ್ಬರೂ ಸೇವಿಸಬಹುದಾದಂತಹ ಆರೋಗ್ಯಕರ ಹಣ್ಣು. ಬಡವರು, ಶ್ರೀಮಂತರು ಎಲ್ಲರೂ ತಿನ್ನಬಹುದಾದಷ್ಟು ಅಗ್ಗ. ಆದ್ರೆ ಸಾಮಾನ್ಯವಾಗಿ ನಾವೆಲ್ಲರೂ ಪಪ್ಪಾಯ ಹಣ್ಣನ್ನು ತಿನ್ನುವ ಸಂದರ್ಭದಲ್ಲಿ ಬೀಜಗಳನ್ನು ಎಸೆದುಬಿಡುತ್ತೇವೆ.
ಆದರೆ ಪಪ್ಪಾಯ ಬೀಜಗಳನ್ನು ಎಸೆಯಬಾರದು. ಯಾಕಂದ್ರೆ ಹಲವಾರು ರೋಗಗಳಿಗೆ ಈ ಬೀಜಗಳಲ್ಲಿ ಮದ್ದಿದೆ. ಪಪ್ಪಾಯ ಬೀಜಗಳಲ್ಲಿ ಅನೇಕ ರೀತಿಯ ಪೋಷಕಾಂಶಗಳಿವೆ. ಇದನ್ನು ನೇರವಾಗಿ ತಿಂದರೆ ಕಹಿಯಾಗಿರುತ್ತದೆ. ಹಾಗಾಗಿ ಬಿಸಿಲಿನಲ್ಲಿ ಒಣಗಿಸಿ, ನಂತರ ಪುಡಿಮಾಡಿ ಸೇವಿಸಬೇಕು.
ಹೃದಯದ ಆರೋಗ್ಯ: ಭಾರತದಲ್ಲಿ ಹೃದ್ರೋಗಿಗಳ ಸಂಖ್ಯೆ ಅತಿ ಹೆಚ್ಚಾಗಿದೆ. ಚಿಕ್ಕ ಚಿಕ್ಕ ವಯಸ್ಸಿನವರು ಕೂಡ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಹಾಗಾಗಿ ಪಪ್ಪಾಯ ಬೀಜಗಳು ಸಂಜೀವಿನಿಯಂತೆ ಕೆಲಸ ಮಾಡಬಲ್ಲದು. ಇದರಲ್ಲಿರುವ ಆಂಟಒಕ್ಸಿಡೆಂಟ್‌ಗಳು ನಮ್ಮ ದೇಹವನ್ನು ಸ್ವತಂತ್ರ ರಾಡಿಕಲ್‌ಗಳಿಂದ ಉಂಟಾಗುವ ಹಾನಿಯಿಂದ ರಕ್ಷಿಸುತ್ತದೆ. ಈ ಬೀಜಗಳ ಸಹಾಯದಿಂದ ರಕ್ತದೊತ್ತಡವನ್ನು ನಿಯಂತ್ರಿಸಬಹುದು.
ಊತ ಕಡಿಮೆಯಾಗುತ್ತದೆ: ಉರಿಯೂತವನ್ನು ಕಡಿಮೆ ಮಾಡಲು ಪಪ್ಪಾಯ ಬೀಜಗಳು ಬಹಳ ಪರಿಣಾಮಕಾರಿ. ಈ ಬೀಜಗಳಲ್ಲಿ ಆಲ್ಕಲಾಯ್ಡ್‌ಗಳು, ಫ್ಲೇವನಾಯ್ಡ್‌ಗಳು ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ. ಇದರಿಂದಾಗಿ ದೇಹದಲ್ಲಿ ಇರುವ ಊತ ಮಾಯವಾಗುತ್ತದೆ.
ಚರ್ಮಕ್ಕೆ ಒಳ್ಳೆಯದು : ನೀವು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಪಪ್ಪಾಯ ಹಣ್ಣಿನ ಬೀಜಗಳು ನಿಮಗೆ ಲಾಭದಾಯಕ. ಇದರಲ್ಲಿರುವ ಆಂಟಿಯೇಜ್ ಗುಣಲಕ್ಷಣಗಳು ಚರ್ಮವನ್ನು ಮೃದುವಾಗಿ ಮತ್ತು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ. ಚರ್ಮದ ಸೋಂಕು ಅಥವಾ ತುರಿಕೆಯ ಸಮಸ್ಯೆ ಇದ್ದರೆ ಅದು ಕೂಡ ನಿವಾರಣೆಯಾಗುತ್ತದೆ.