ಪಪ್ಪಾಯ ಹಣ್ಣು ಆರೋಗ್ಯಕ್ಕೆ ಒಳ್ಳೆಯದು. ಇತ್ತೀಚಿನ ನಗರ ಜೀವನ ಶೈಲಿಯಲ್ಲಿ ಬೆಳಗಿನ ಉಪಹಾರದ ಒಂದು ಭಾಗವಾಗಿದೆ ಈ ಪಪ್ಪಾಯ. ಆರೋಗ್ಯಕ್ಕೆ, ಡಯೆಟ್ ಗೆ ಇದು ಅತ್ಯವಶ್ಯಕವಾದ ಹಣ್ಣು. ಆದ್ರೆ ಈ ಹಣ್ಣು ಕತ್ತರಿಸಿ, ಅದರಲ್ಲಿನ ಕಪ್ಪು ಬೀಜವನ್ನು ಎಸೆದು ಬಿಡೋದು ನಮ್ಮ ಅಭ್ಯಾಸ. ನೀವೇನಾದ್ರೂ ಈ ಪಪ್ಪಾಯ ಬೀಜಗಳಿಂದಾಗುವ ಉಪಯೋಗ ಕೇಳಿದ್ರೆ ಖಂಡಿತಾ ಇನ್ಮುಂದೆ ಪಪ್ಪಾಯ ಬೀಜಗಳನ್ನು ಎಸೆಯುವುದಿಲ್ಲ.
ಈ ಪಪ್ಪಾಯ ಬೀಜಗಳ ಸೇವನೆಯಿಂದ ಹೊಟ್ಟೆಯ ಹುಳುಗಳು ನಾಶವಾಗುತ್ತವೆ. ಜೊತೆಗೆ ದೇಹಕ್ಕೆ ಸೋಂಕು ಹರಡುವುದನ್ನು ತಡೆಹಿಡಿಯುತ್ತೆ. ಹಾಗೆಯೇ ಮೊಣಕಾಲು ನೋವು, ಜಾಯಿಂಟ್ ಪೇನ್, ಕಾಲು ಊದಿಕೊಳ್ಳುವುದು ಇದಕ್ಕೆಲ್ಲಾ ಪಪ್ಪಾಯ ಬೀಜ ಪರಿಣಾಮಕಾರಿ ಔಷಧ.
ಆಲ್ಕೋಹಾಲ್ ಸೇವನೆ ಮಾಡಿ ಲಿವರ್ ಸಮಸ್ಯೆಯಿಂದ ಬಳಲುತ್ತಿರುವವರಿಗೂ ಪಪ್ಪಾಯ ಬೀಜ ಸೇವನೆ ತುಂಬಾ ಪರಿಣಾಮಕಾರಿಯಾಗಲಿದೆ. ಐದಾರು ಪಪ್ಪಾಯ ಬೀಜಗಳನ್ನು ಪುಡಿ ಮಾಡಿ ಲಿಂಬೆ ರಸದೊಂದಿಗೆ ಒಂದು ತಿಂಗಳು ಸೇವಿಸಿ ನೋಡಿ ನಿಮ್ಮ ಲಿವರ್ ಸಮಸ್ಯೆ ಕಡಿಮೆಯಾಗಲಿದೆ. ಹಾಗೆಯೆ ಅಜೀರ್ಣ ಸಮಸ್ಯೆಯಿಂದ ಬಳಲುತ್ತಿರುವವರಿಗೂ ಪಪ್ಪಾಯ ಬೀಜ ಸೇವನೆಯಿಂದ ಸಮಸ್ಯೆ ಬಗೆಹರಿಯಲಿದೆ.
ಮಹತ್ವದ ವಿಚಾರ ಅಂದ್ರೆ ಪಪ್ಪಾಯ ಬೀಜಕ್ಕೆ ಕ್ಯಾನ್ಸರ್, ಟ್ಯೂಮರ್ ವಿರುದ್ಧ ಹೋರಾಡುವ ಶಕ್ತಿಯಿದೆ. ಹೀಗಾಗಿ ಪಪ್ಪಾಯ ಬೀಜ ಸೇವನೆ ಒಳ್ಳೆಯದು.
ಪಪ್ಪಾಯ ಹಣ್ಣಿನ ಜೊತೆಗೆ ಬೀಜವನ್ನು ಸೇವಿಸಬಹುದು. ಇಲ್ಲಾ ಅಂದ್ರೆ ಪಪ್ಪಾಯ ಬೀಜಗಳನ್ನ ಒಣಗಿಸಿ ಪುಡಿ ಮಾಡಿ ಇಟ್ಟುಕೊಂಡ್ರೆ ನಿಮಗೆ ಬೇಕೆನಿಸಿದಾಗ ಬಳಸಬಹುದು.
ಆದ್ರೆ ಯಾವುದೇ ಕಾರಣಕ್ಕೂ ಗರ್ಭಿಣಿಯರಾಗಿದ್ದಾಗ ಅಥವಾ ಮಕ್ಕಳಿಗೆ ಹಾಲು ಕುಡಿಸುವಾಗ ಈ ಪಪ್ಪಾಯ ಬೀಜಗಳನ್ನು ಬಳಸಬಾರದು. ಮಕ್ಕಳಿಗೂ ಕೂಡಾ ಪಪ್ಪಾಯ ಬೀಜವನ್ನು ಕೊಡಬೇಡಿ.