ಕಡಿಮೆ ಕ್ಯಾಲರಿ ಹೊಂದಿರುವ ಪಪಾಯ ತಿಂದು ತೂಕ ಉಳಿಸಿಕೊಳ್ಳಬಹುದು ಎಂಬುದು ನಿಮಗೆ ಗೊತ್ತೇ? ಪಪ್ಪಾಯದಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ಮತ್ತು ವಿಟಮಿನ್ ಗಳು ನಮ್ಮ ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ನೀಡಿ ಆರೊಗ್ಯವಂತರನ್ನಾಗಿ ಮಾಡುತ್ತವೆ.
ಪಪ್ಪಾಯ ತೂಕ ಇಳಿಸುವುದರೊಂದಿಗೆ ದೇಹದ ಹಾಗೂ ರಕ್ತದ ಕಲ್ಮಶಗಳನ್ನು ಹೊರಹಾಕುತ್ತದೆ. ಮಲವಿಸರ್ಜನೆಯನ್ನು ಸುಲಭವಾಗಿಸುತ್ತದೆ.
ಪಪ್ಪಾಯ ಕಾಯಿಯನ್ನು ಕತ್ತರಿಸಿ, ಉಪ್ಪು ಹಾಗೂ ಎರಡು ಚಮಚ ಕಾಳು ಮೆಣಸಿನ ಪುಡಿ ಹಾಕಿ ಕುದಿಸಿ ನೀರನ್ನು ಕುಡಿಯಬೇಕು. ಹೀಗೆ ಒಂದು ವಾರ ಕಾಲ ಮಾಡಬೇಕು. ಪಪ್ಪಾಯ ಹಣ್ಣಿನ ಸ್ಮೂದಿ ತಯಾರಿಸಿ ಮುಂಜಾನೆಯೇ ಸೇವಿಸುವುದರಿಂದ ದೇಹಕ್ಕೆ ಬೇಕಾದ ಪೋಷಕಾಂಶಗಳು ದೊರೆಯುತ್ತವೆ ಹಾಗೂ ತೂಕವೂ ಗಣನೀಯವಾಗಿ ಕಡಿಮೆಯಾಗುತ್ತದೆ.
ಆದರೆ ನೆನಪಿರಲಿ, ಗರ್ಭಿಣಿಯರು ಕಡ್ಡಾಯವಾಗಿ ಪಪ್ಪಾಯ ಹಣ್ಣಾಗಲಿ, ಕಾಯಿಯಾಗಲಿ ಸೇವಿಸಬಾರದು.