ಹಣ್ಣುಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು. ಆದ್ರೆ ಅತಿಯಾದ್ರೆ ಅಮೃತವೂ ವಿಷ. ಹಾಗೆ ಪಪ್ಪಾಯಿ ಹಣ್ಣನ್ನು ಅತಿಯಾಗಿ ತಿಂದ್ರೆ ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ. ಪಪ್ಪಾಯಿ ಸೇವನೆಗೆ ಸೂಕ್ತ ಸಮಯವಿದೆ. ಅದನ್ನು ತಪ್ಪಿದ್ರೆ ಸಮಸ್ಯೆ ನಿಶ್ಚಿತ.
ದಿನದಲ್ಲಿ ಒಂದಕ್ಕಿಂತ ಹೆಚ್ಚು ಕಪ್ ಪಪ್ಪಾಯಿ ಸೇವನೆ ಮಾಡಬಾರದು. ಹೆಚ್ಚು ಪಪ್ಪಾಯಿ ಸೇವನೆ ನಿಮ್ಮ ಗಂಟಲಿನ ಮೇಲೆ ಪ್ರಭಾವ ಬೀರುತ್ತದೆ.
ಪಪ್ಪಾಯಿ ಗರ್ಭಾಶಯವನ್ನು ಸಂಕುಚಿತಗೊಳಿಸುತ್ತದೆ. ಹಾಗಾಗಿ ಗರ್ಭಿಣಿಯರು ಪಪ್ಪಾಯ ಸೇವನೆಯಿಂದ ದೂರವಿರಬೇಕು. ಪಪ್ಪಾಯಿ ಗರ್ಭಪಾತಕ್ಕೆ ಕಾರಣವಾಗುತ್ತದೆ.
ಗರ್ಭಿಣಿಯರು ಮಾತ್ರವಲ್ಲ ಹೆರಿಗೆಯಾದ ಕೆಲ ದಿನಗಳ ಕಾಲವೂ ಪಪ್ಪಾಯಿ ತಿನ್ನಬಾರದು. ಪಪ್ಪಾಯಿಯಲ್ಲಿರುವ ಪೇಪೈನ್ ಹೆಸರಿನ ವಿಷಕಾರಿ ಪದಾರ್ಥ, ಮಕ್ಕಳ ಆರೋಗ್ಯವನ್ನು ಹಾಳು ಮಾಡುತ್ತದೆ.
ಪಪ್ಪಾಯಿಯಲ್ಲಿರುವ ಲ್ಯಾಟೆಕ್ಸ್ ಹೆಸರಿನ ಪದಾರ್ಥ ಅಲರ್ಜಿಯುಂಟು ಮಾಡುತ್ತದೆ. ಅಲರ್ಜಿ ಸಮಸ್ಯೆಯಿರುವವರು ಪಪ್ಪಾಯಿ ಹಣ್ಣನ್ನು ತಿನ್ನಬಾರದು.