ಪಪ್ಪಾಯಿ ಹಣ್ಣು ಆರೋಗ್ಯಕ್ಕೆ ಒಳ್ಳೆಯದು ಎನ್ನುವ ವಿಚಾರ ಎಲ್ಲರಿಗೂ ಗೊತ್ತು. ಪಪ್ಪಾಯಿ ರುಚಿಯಾದ ಹಣ್ಣುಗಳಲ್ಲಿ ಒಂದು. ಎಂದಾದ್ರೂ ಪಪ್ಪಾಯಿ ಹಣ್ಣಿನ ಬದಲು ಎಲೆಯ ಜ್ಯೂಸ್ ಸೇವನೆ ಮಾಡಿದ್ದೀರಾ? ಸೇವನೆ ಮಾಡಿಲ್ಲ ಎಂದಾದ್ರೆ ಇಂದಿನಿಂದಲೇ ಸೇವನೆ ಶುರುಮಾಡಿ. ಪಪ್ಪಾಯಿ ಹಣ್ಣು ತಿನ್ನುವ ಜೊತೆಗೆ ಅದ್ರ ಎಲೆಯ ಜ್ಯೂಸ್ ಸೇವನೆ ಮಾಡುವುದರಿಂದ ಸಾಕಷ್ಟು ರೋಗಗಳು ಓಡಿ ಹೋಗ್ತವೆ.
ಪಪ್ಪಾಯಿ ಎಲೆಯಲ್ಲಿ ಕ್ಯಾನ್ಸರ್ ವಿರೋಧಿ ಗುಣವಿದೆ. ಇದು ಪ್ರತಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ. ಗರ್ಭಕಂಠದ ಕ್ಯಾನ್ಸರ್, ಸ್ತನ ಕ್ಯಾನ್ಸರ್ ನ ಸೆಲ್ಸ್ ಜಾಸ್ತಿಯಾಗುವುದನ್ನು ನಿಯಂತ್ರಿಸುತ್ತದೆ.
ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ಬ್ಯಾಕ್ಟೀರಿಯಾ ಬೆಳವಣಿಗೆಯನ್ನು ತಡೆಯುತ್ತದೆ. ದೇಹದಲ್ಲಿ ಬಿಳಿ ರಕ್ತಕಣ ಹಾಗೂ ಪ್ಲೇಟ್ ಸೆಲ್ಸ್ ಹೆಚ್ಚಿಸಲು ನೆರವಾಗುತ್ತದೆ.
ಪಪ್ಪಾಯಿ ಎಲೆಗಳು ಡೆಂಗ್ಯೂವಿಗೆ ರಾಮಬಾಣ. ಡೆಂಗ್ಯೂ ಹಾಗೂ ಮಲೇರಿಯಾದಿಂದ ಬಳಲುತ್ತಿರುವವರು ಪಪ್ಪಾಯಿ ಎಲೆಗಳ ಜ್ಯೂಸ್ ಕುಡಿಯುವುದು ಬಹಳ ಲಾಭಕರ.
ಮಹಿಳೆಯರಿಗೆ ಪಪ್ಪಾಯಿ ಎಲೆಯ ಜ್ಯೂಸ್ ಹೇಳಿ ಮಾಡಿಸಿದ ಔಷಧಿ. ಮುಟ್ಟಿನ ನೋವನ್ನು ಇದು ಕಡಿಮೆ ಮಾಡುತ್ತದೆ. ಪಪ್ಪಾಯಿ ಎಲೆಯ ಜೊತೆ ಹುಣಸೆ, ಉಪ್ಪು ಹಾಗೂ ಒಂದು ಗ್ಲಾಸ್ ನೀರು ಸೇರಿಸಿ ಕಷಾಯ ಮಾಡಿ, ಅದು ತಣ್ಣಗಾದ ಮೇಲೆ ಸೇವನೆ ಮಾಡುವುದರಿಂದ ಬಹಳಷ್ಟು ಆರಾಮ ಸಿಗುತ್ತದೆ.